ದಿನೇಶ ಶೆಟ್ಟಿ ಅಧ್ಯಕ್ಷರು ಯುವ ಕಾಂಗ್ರೆಸ್ ಹೆಬ್ರಿ

ಕಾರ್ಕಳದ ಯುವತಿಯ ಅಪಹರಿಸಿ ಅತ್ಯಾಚಾರ ಪ್ರಕರಣವನ್ನು ರಾಜಕೀಯ ಲಾಭಕ್ಕೆ ಬಳಸಲು ಹೋದ ನೀವು ಈಗ ಏನು ಹೇಳುತ್ತೀರಿ. ಪೊಲೀಸರು ಬಂಧಿಸಿದ ಆರೋಪಿ ನಿಮ್ಮ ಪಕ್ಷದವರೇ, ನಿಮ್ಮ ಕಟ್ಟಾ ಬೆಂಬಲಿಗ, ಈಗ ನೀವೆ ಹೇಳಿ ಡ್ರಗ್ಸ್ ಮಾಫಿಯಾದ ಹಿಂದೆ ಯಾರು ಇದ್ದಾರೆ ಶಾಸಕರೇ…ಅನ್ಯಾಯವಾದ ಯುವತಿಗೆ ನ್ಯಾಯ ಸಿಗಬೇಕು, ರಕ್ಷಣೆ ಖಂಡಿತವಾಗಿಯೂ ಸಿಗಬೇಕು. ಆರೋಪಿಗಳು ಯಾರೇ ಆಗಲಿ, ಯಾವ ಧರ್ಮದವರೇ ಆಗಲಿ ಅವರಿಗೆ ಕಠಿಣ ಶಿಕ್ಷೆಯಾಗಬೇಕು. ಆದರೆ ಈಗ ಬಂಧಿಸಿರುವ ೩ನೇ ಆರೋಪಿ ನಿಮ್ಮ ಬೆಂಬಲಿಗ ಎಂದು ಗೊತ್ತಾದ ಮೇಲೆ ಮೌನ ಯಾಕೆ ಶಾಸಕರೇ…ಪ್ರತಿ ಭಾರಿಯೂ ಜಾತಿ ಧರ್ಮ, ಕೋಮು ಭಾವನೆ ಕೆರಳಿಸಿ ಧ್ವೇಷದ ಭಾಷಣ ಮಾಡುತ್ತಿರುವ ನೀವು ಜನರನ್ನು ಎತ್ತಿಕಟ್ಟುತ್ತೀರಿ. ಮುಸ್ಲೀಂ ಮಿತ್ರನೊಂದಿಗೆ ಹುಟ್ಟು ಹಬ್ಬ ಆಚರಣೆ ಮಾಡುತ್ತೀರಿ. ಹಿಂದ್ವುತ್ವ ಧರ್ಮ ನಿಮಗೆ ಚುನಾವಣೆಗೆ ಮಾತ್ರ. ಈಗ ಅನ್ಯಾಯವಾಗಿರುವ ಹಿಂದೂ ಯುವತಿಗೆ ನಿಮ್ಮಿಂದ ನ್ಯಾಯ ಒದಗಿಸಲು ಸಾಧ್ಯವೇ…ನಿಮ್ಮ ಬೆಂಬಲಿಗ ಬಿಜೆಪಿ ಕಾರ್ಯಕರ್ತನಿಂದಲೇ ಈಗ ಯುವತಿಗೆ ಅನ್ಯಾಯವಾಗಿದೆ, ನಿಮ್ಮ ಕಾರ್ಯಕರ್ತನೇ ಡ್ರಗ್ಸ್ ಮಾಫಿಯಾದ ರೂವಾರಿ ಎಂಬುದು ಗೊತ್ತಾಗಿದೆ ಈಗ ನೀವು ಎನು ಹೇಳುತ್ತಿರಿ. ನಿಮ್ಮ ಕಾರ್ಯಕರ್ತನ ಪಾತ್ರವನ್ನು ಸ್ಪಷ್ಟಪಡಿಸಿ ಎಂದು ದಿನೇಶ ಶೆಟ್ಟಿ ಅಧ್ಯಕ್ಷರು ಯುವ ಕಾಂಗ್ರೆಸ್ ಹೆಬ್ರಿ ದಿನೇಶ ಶೆಟ್ಟಿ ಅಧ್ಯಕ್ಷರು ಯುವ ಕಾಂಗ್ರೆಸ್ ಹೆಬ್ರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.













