32.5 C
Udupi
Monday, April 27, 2026
spot_img
spot_img
HomeBlogಅಜೆಕಾರಿನಲ್ಲಿ ಎಂ.ಪಿ.ಎಂ. ಕಾಲೇಜು ಎನ್‌.ಎಸ್‌.ಎಸ್‌. ಶಿಬಿರ ಉದ್ಘಾಟನೆ

ಅಜೆಕಾರಿನಲ್ಲಿ ಎಂ.ಪಿ.ಎಂ. ಕಾಲೇಜು ಎನ್‌.ಎಸ್‌.ಎಸ್‌. ಶಿಬಿರ ಉದ್ಘಾಟನೆ

ಎನ್ನೆಸ್ಸೆಸ್ ಶಿಬಿರದಿಂದಾಗಿ ಸಹಕಾರ ಸಹಬಾಳ್ವೆಯನ್ನೊಳಗೊಂಡಂತೆ ಮಾನವೀಯ ಸಂಬಂಧಗಳು ಮತ್ತು ಸಾಮಾಜಿಕ ಕಳಕಳಿ ವಿದ್ಯಾರ್ಥಿಗಳಲ್ಲಿವರ್ಧಿಸಬಲ್ಲದು. ಇಲ್ಲಿ ಕಂಡುಕೊಂಡಂತ ಇಂತಹ ಮೌಲ್ಯಗಳನ್ನುವಿದ್ಯಾರ್ಥಿಗಳು ತಮ್ಮ ಜೀವನದುದ್ದಕ್ಕೂ ಅಳವಡಿಸಿಕೊಂಡು ಬಂದಾಗ ಮಾತ್ರಎನ್ನೆಸ್ಸೆಸ್ ನಿಜವಾದ ದ್ಯೇಯೋದ್ದೇಶ ಈಡೇರಬಹುದು ಎಂದು ಮರ್ಣೆ ಗ್ರಾಮಪಂಚಾಯತ್, ಅಧ್ಯಕ್ಷರಾದ ಶ್ರೀಮತಿ ಪ್ರಭಾವತಿ ಎಂ ಹೇಳಿದರು.

ಅವರುಅಜೆಕಾರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಎಂ ಪಿ ಎಂ ಸರಕಾರಿಪ್ರಥಮ ದರ್ಜೆ ಕಾಲೇಜು ಕಾರ್ಕಳ ಇದರ ರಾಷ್ಟ್ರೀಯ ಸೇವಾ ಯೋಜನೆಯವಾರ್ಷಿಕ ವಿಶೇಷ ಶಿಬಿರ ಉದ್ಘಾಟಿಸಿ ಮಾತನಾಡಿದರು.ಕಾರ‍್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದಡಾ. ಸುರೇಶ್ ರೈ. ಕೆ, ಅವರು ಮಾತನಾಡಿ ‘’ವಿದ್ಯಾರ್ಥಿಗಳು ಕೇವಲಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಿದರೆ ಸಾಕಾಗುವುದಿಲ್ಲ. ಶೈಕ್ಷಣಿಕಪ್ರಬುದ್ಧತೆಯ ಜೊತೆಗೆ ಸಾಮಾಜಿಕ ಕಳಕಳಿಯನ್ನುಬೆಳಿಸಿಕೊಳ್ಳುವುದೂ ಮುಖ್ಯ ಎನ್ನೆಸ್ಸೆಸ್ ವಿದ್ಯಾರ್ಥಿಗಳನ್ನು ಸಮಾಜಮುಖಿಯಾಗಿಯೋಚಿಸುವಂತೆ ಮಾಡುತ್ತದೆ ಮಾತ್ರವಲ್ಲ ಶಿಸ್ತು, ಸಹಬಾಳ್ವೆ ಹಾಗೂಸಹಕಾರಗಳಂತಹ ಅಭೂತಪೂರ್ವ ಮೌಲ್ಯಗಳನ್ನುಮೈಗೂಡಿಸಿಕೊಳ್ಳುವಂತೆ ಮಾಡುತ್ತದೆ.” ಎಂದರು.

ಮಾಜಿ ತಾಲೂಕುಪಂಚಾಯತ್ ಉಪಾಧ್ಯಕ್ಷರಾದ ಶ್ರೀ ಹರೀಶ್ ನಾಯಕ್, ಮರ್ಣೆ ಗ್ರಾಮಪಂಚಾಯತ್‌ನ ಸದಸ್ಯರಾದ ಶ್ರೀ ಜಾನ್ ಟೆಲ್ಲಿಸ್, ಯಕ್ಷಕಲಾರಂಗ ಕಾರ್ಕಳದಕಾರ್ಯದರ್ಶಿ ಹಾಗೂ ತೆಂಕು ತಿಟ್ಟಿನ ಹೆಸರಾಂತ ಯಕ್ಷಗುರುಗಲಾದ ಶ್ರಿಮಹಾವೀರ ಪಾಂಡಿ, ಅಜೆಕಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಮುಖ್ಯೋಪಾಧ್ಯಾಯರಾದ ಶ್ರೀ ಬಾಲಕೃಷ್ಣ ನಾಯಕ್ ಶಾಲಾಭಿವೃದ್ಧಿಸಮಿತಿಯ ಅಧ್ಯಕ್ಷರಾದ ಶ್ರೀ ಸಂತೋಷ ಪೂಜಾರಿ ಮುಖ್ಯ ಅತಿಥಿಗಳಾಗಿಉಪಸ್ಥಿತರಿದ್ದರು.

ರಾಷ್ಟ್ರೀಯ ಸೇವಾ ಯೋಜನಾಧಿಕಾರಿಯಾದ ಶ್ರೀಮತಿ ಸೌಮ್ಯ ಹೆಚ್. ಕೆ,ಸ್ವಾಗತಿಸಿದರು, ನಿರ್ವಹಣಾ ಶಾಸ್ತç ಸಹಾಯಕ ಪ್ರಾದ್ಯಾಪಕರಾದ ಶ್ರೀ ಸುಬ್ರಹ್ಮಣ್ಯಕೆ. ಸಿ ಶಿಬಿರದ ಮುನ್ನೋಟವನ್ನು ನೀಡಿದರು . ಇನ್ನೊರ್ವ ರಾಷ್ಟ್ರೀಯ ಸೇವಾಯೋಜನಾಧಿಕಾರಿಯಾದ ಶ್ರೀ ಪ್ರಸನ್ನ ಕುಮಾರ್ ವಂದಿಸಿದರು. ಕಾಲೇಜಿನರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯದರ್ಶಿ ಕು. ವಿಲಾಸಿನಿ ಕಾರ್ಯಕ್ರಮನಿರೂಪಿಸಿದರು. ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿ ಕಾರ್ಯದರ್ಶಿಗಳಾದಉತ್ಸವ್, ಸುಮಂತ್ ಹಾಗೂ ವಿಖ್ಯಾತ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಅರ್ಥಶಾಸ್ತ್ರ ಸಹ ಪ್ರಾಧ್ಯಾಪಕಿ ಶ್ರೀಮತಿ ಜಯಲಕ್ಷ್ಮಿ ನಿರ್ವಹಣಾ ಶಾಸ್ತ್ರ ಸಹಾಯಕ ಪ್ರಾಧ್ಯಾಪಕಿ ಕು. ಸಂಧ್ಯಾ ಭಂಡಾರಿ ಎಸ್ಮತ್ತಿತರು ಉಪಸ್ಥಿತರಿದ್ದರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page