
ಭಾರತೀಯ ಸೇನೆಯ ಅಗ್ನಿವೀರ್ ನೇಮಕಾತಿಯ ಆನ್‌ಲೈನ್ ಸಾಮಾನ್ಯ ಪ್ರವೇಶ ಪರೀಕ್ಷೆ (CEE) ನೋಂದಣಿ ದಿನಾಂಕವು ಈ ಮೊದಲು ಈ ಕೊನೆಯ ದಿನಾಂಕ ಏಪ್ರಿಲ್ 10 ಆಗಿದ್ದು ಇದೀಗ ಏಪ್ರಿಲ್ 25 ರವರೆಗೆ ವಿಸ್ತರಿಸಲಾಗಿದೆ.
ವಿಶೇಷವೆಂದರೆ ಈ ಬಾರಿ ಫಿಟ್‌ನೆಸ್ ಪರೀಕ್ಷೆ ಮತ್ತು ದೈಹಿಕ ಮಾಪನ ಪರೀಕ್ಷೆಯ ಜೊತೆಗೆ, ಅಭ್ಯರ್ಥಿಗಳು ಹೊಂದಾಣಿಕೆ ಪರೀಕ್ಷೆಗೂ ಒಳಗಾಗಬೇಕಾಗುತ್ತದೆ. 12 ಜಿಲ್ಲೆಗಳ ಅಭ್ಯರ್ಥಿಗಳಿಗೆ ಅಗ್ನಿವೀರ್ ಜನರಲ್ ಡ್ಯೂಟಿ, ಅಗ್ನಿವೀರ್ ಟೆಕ್ನಿಕಲ್, ಅಗ್ನಿವೀರ್ ಕ್ಲರ್ಕ್/ಸ್ಟೋರ್ ಕೀಪರ್ ಟೆಕ್ನಿಕಲ್, ಅಗ್ನಿವೀರ್ ಟ್ರೇಡ್ಸ್‌ಮ್ಯಾನ್ 10 ನೇ ಪಾಸ್ ಮತ್ತು 8 ನೇ ಪಾಸ್ ವಿಭಾಗಗಳ ನೇಮಕಾತಿಗಾಗಿ ಆನ್‌ಲೈನ್ ನೋಂದಣಿ ಮಾಡಲಾಗುತ್ತಿದ್ದು ಇದರ ನಂತರ, ಜಂಟಿ ಪ್ರವೇಶ ಪರೀಕ್ಷೆ ಮತ್ತು ನೇಮಕಾತಿ ರ್ಯಾಲಿಯನ್ನು ಆಯೋಜಿಸಲಾಗುವುದು.
2025-26ನೇ ನೇಮಕಾತಿ ವರ್ಷದಿಂದ ಆನ್‌ಲೈನ್ ಸಾಮಾನ್ಯ ಪ್ರವೇಶ ಪರೀಕ್ಷೆ (CEE) ಮತ್ತು ರ್ಯಾಲಿಯನ್ನು ನಡೆಸುವಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದ್ದು ಆನ್‌ಲೈನ್ ಸಿಇಇ 13 ಭಾಷೆಗಳಲ್ಲಿ (ಅಂದರೆ ಇಂಗ್ಲಿಷ್, ಹಿಂದಿ, ಮಲಯಾಳಂ, ಕನ್ನಡ, ತಮಿಳು, ತೆಲುಗು, ಪಂಜಾಬಿ, ಒರಿಯಾ, ಬಂಗಾಳಿ, ಉರ್ದು, ಗುಜರಾತಿ, ಮರಾಠಿ ಮತ್ತು ಅಸ್ಸಾಮಿ) ನಡೆಯಲಿದೆ. ಇದಾದ ನಂತರ, ವರ್ಷದ ಕೊನೆಯಲ್ಲಿ ಸೇನಾ ನೇಮಕಾತಿ ರ್ಯಾಲಿಯನ್ನು ಆಯೋಜಿಸಲಾಗುವುದು. ಎಲ್ಲಾ ಅಭ್ಯರ್ಥಿಗಳು joinindianarmy.nic.in ಗೆ ಭೇಟಿ ನೀಡುವ ಮೂಲಕ ಆನ್‌ಲೈನ್ CEE ಗಾಗಿ ತಮ್ಮ ಆನ್‌ಲೈನ್ ನೋಂದಣಿಯನ್ನು ಪೂರ್ಣಗೊಳಿಸಬೇಕಾಗುತ್ತದೆ. ಪರೀಕ್ಷೆಗೆ ಪ್ರವೇಶ ಪತ್ರಗಳನ್ನು ಆನ್‌ಲೈನ್‌ನಲ್ಲಿ ನೀಡಲಾಗುತ್ತದೆ.
ಈ ಬಾರಿ ಅಗ್ನಿವೀರ್ ನೇಮಕಾತಿಯಲ್ಲಿ, 1.6 ಕಿಮೀ ಓಟದ ಪರೀಕ್ಷೆಯಲ್ಲಿ ಹೆಚ್ಚುವರಿ ರನ್ ಟೈಮಿಂಗ್‌ನೊಂದಿಗೆ ನಾಲ್ಕು ರೇಸ್ ಗ್ರೂಪ್ ಎನ್‌ಕ್ಲೋಸರ್‌ಗಳನ್ನು ಪರಿಚಯಿಸಲಾಗುತ್ತಿದೆ. ದೈಹಿಕ ಸದೃಢತಾ ಪರೀಕ್ಷೆ ಮತ್ತು ದೈಹಿಕ ಮಾಪನ ಪರೀಕ್ಷೆಯಲ್ಲಿ ಅರ್ಹತೆ ಪಡೆಯುವ ಎಲ್ಲಾ ಅಭ್ಯರ್ಥಿಗಳು ಹೊಂದಾಣಿಕೆ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ.





















