✍️ ರೇಷ್ಮಾ ಶೆಟ್ಟಿ ಗೊರೂರು

ಅರುಣಾಲಿಂಗನಕೆ ಚಿತ್ರ
ಸಂಗಾತಿಯಾದರು ಪ್ರೀತಿಯಲಿ,
ನವಿರಾದ ವರ್ಷಗಳು
ಜೊತೆಯಾಯ್ತು ಬಾಳಿನಲಿ ..//
ಪಲ್ಲವಿಯ ಜೊತೆ ಅಥರ್ವ
ಮಡಿಲಲಿ ಕೂತು ಹಾಲುಂಡರು
ಪ್ರೀತಿ ಮಮಕಾರದಿಂದಲಿ
ಸ್ನೇಹ ಸಾಮರಸ್ಯವ ಕಂಡರು.//
ಸಪ್ತಪದಿಯ ಹೆಜ್ಜೆ ಗುರುತು
ನಿನ್ನೆ ಮೊನ್ನೆಯಂತಿದ್ದರೂ..
25 ವರ್ಷಗಳು ಪೂರೈಸಿ
ಪ್ರೀತಿ ಜೇನ್ಮಳೆಯ ಹರಿಸಿದರು.//
ನೂರ್ಕಾಲ ಹೀಗೆ ಜೊತೆಯಾಗಿರಿ
ಬಾಂಧವ್ಯ ಮತ್ತಷ್ಟು ಸವಿಯಾಗಲಿ
ನಮ್ಮನ್ನು ಸದಾ ಆಶೀರ್ವದಿಸುತ
ಬೆಸೆದ ಬಂಧ ಬಿಗಿಯಾಗಲಿ…//
✍🏻ರೇಷ್ಮಾ ಶೆಟ್ಟಿ ಗೊರೂರು.