🔴ಪೊಲೀಸ್ ಇಲಾಖೆ ಸರಕಾರದ ಕೈ ಗೊಂಬೆಯಾಗಿ ವರ್ತಿಸಬಾರದು
🔴ಶರಣ್ ಪಂಪವೆಲ್ ಮೇಲೆ ದಾಖಲಿಸಿರುವ ಕೇಸನ್ನು ತಕ್ಷಣ ಹಿಂಪಡಿಬೇಕು ಇಲ್ಲದಿದ್ದಲ್ಲಿ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು
ಸುನಿಲ್.ಕೆ.ಆರ್
ವಿಶ್ವ ಹಿಂದೂ ಪರಿಷದ್ ಧರ್ಮ ಪ್ರಸಾರ ಪ್ರಮುಖ್

ಮಂಗಳೂರಿನ ಸಾರ್ವಜನಿಕ ರಸ್ತೆಯಲ್ಲಿ ನಮಾಜ್ ಮಾಡಿರುವುವ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಪೊಲೀಸ್ ಇಲಾಖೆ ಆ ಕೇಸನ್ನು ಹಿಂಪಡೆಯುವಂತ ನಿರ್ಧಾರಕ್ಕೆ ಬಂದಿದ್ದನ್ನು ವಿಶ್ವಹಿಂದು ಪರಿಷದ್ ತೀವ್ರವಾಗಿ ವಿರೋದಿಸುತ್ತದೆ.
ಒಂದು ವೇಳೆ ಪೊಲೀಸ್ ಇಲಾಖೆ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸರಕಾರದ ಕೈ ಗೊಂಬೆಯಾಗಿ ವರ್ತಿಸಬಾರದು ಮತ್ತು ಈ ಕೇಸನ್ನು ಹಿಂಪಡೆದಲ್ಲಿ ವಿಶ್ವಹಿಂದು ಪರಿಷತ್ತು ರಾಜ್ಯದಲ್ಲಿ ತೀವ್ರವಾದ ಹೋರಾಟ ನಡೆಸಲಾಗುವುದು.
ಮಂಗಳೂರಿನ ಸಾರ್ವಜನಿಕ ರಸ್ತೆಯಲ್ಲಿ ನಮಾಜ್ ಮಾಡಿದವರ ವಿರುದ್ಧ ಹಾಕಿದ ಕೇಸನ್ನ ಮುಸ್ಲಿಂ ಸಂಘಟನೆಯ ಒತ್ತಡಕ್ಕೆ ಮಣಿದು ಕೇಸನ್ನು ರದ್ದು ಮಾಡಲು ನಿರ್ಧರಿಸುವುದು ಸರಿಯಲ್ಲ. ವಿಶ್ವ ಹಿಂದೂ ಪರಿಷತ್ತಿನ ಪ್ರಮುಖರಾದ ಶರಣ್ ಪಂಪವೆಲ್ ಮೇಲೆ ಕೇಸು ದಾಖಲಿಸಿರುವುದು ಅತ್ಯಂತ ಖಂಡನೀಯ ತಕ್ಷಣ ಈ ಕೇಸನ್ನು ಹಿಂಪಡಿಬೇಕು ಇಲ್ಲದಿದ್ದಲ್ಲಿ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ವಿಶ್ವ ಹಿಂದೂ ಪರಿಷದ್ ಧರ್ಮ ಪ್ರಸಾರ ಪ್ರಮುಖರಾದ ಸುನಿಲ್ ಕೆ ಆರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.