
ದುರ್ಗ ಗ್ರಾಮದ ಮಾಂಜ ಎಂಬಲ್ಲಿ ದಿನೇಶ್ ಎಂಬವರು ಕದ್ದು ತಂದ 15 ಯುನಿಟ್ ಮರಳನ್ನು ಕಾರ್ಕಳ ಗ್ರಾಮಾಂತರ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿ ದಿನೇಶ್ ಎಂಬವರು ಈ ಅಕ್ರಮ ಸಾಗಾಟ ನಡೆಸುತ್ತಿದ್ದು, ತನ್ನ ಶೆಡ್‌ನಲ್ಲಿ ಅಕ್ರಮ ದಾಸ್ತಾನು ಮಾಡುವ ಉದ್ದೇಶದಿಂದ ಈ ಮರಳು ಸಾಗಾಟ ನಡೆಸಲಾಗಿದೆ ಎನ್ನಲಾಗಿದೆ. ದುರ್ಗ ಗ್ರಾಮದಲ್ಲಿ ರಾತ್ರಿ ವೇಳೆ ಮರಳು ಸಾಗಾಟ ದಂಧೆ ಹೆಚ್ಚಳವಾಗಿದ್ದು, ಯಾವುದೇ ಪರವಾನಿಗೆಯಿಲ್ಲದೆ ಸಾಗಾಟವಾಗಿರುವ ಕುರಿತು ಸ್ಥಳೀಯರು ಮಾಹಿತಿ ನೀಡಿದ್ದರು. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.