
ಕಾರ್ಕಳ: ಬಂಗ್ಲೆಗುಡ್ಡೆ, ಕಸಬಾ ಗ್ರಾಮದ ನಿವಾಸಿ ಮೊಹಮ್ಮದ್ ರಫೀಕ್ (33ವರ್ಷ) ಎಂಬಾತನ ಮೇಲೆ ಹಲವು ಪ್ರಕರಣಗಳ ದಾಖಲಾಗಿದ್ದು ನ್ಯಾಯಾಲಯಕ್ಕೆ ಹಾಜರಾಗದೆ 2021 ರಲ್ಲಿ ವಿದೇಶಕ್ಕೆ ಹೋಗಿ ತಲೆಮರೆಸಿಕೊಂಡಿದ್ದ.
ನ್ಯಾಯಾಲಯವು ಮೊಹಮ್ಮದ್ ರಫೀಕ್ ಗೆ ಬಂಧನ ದ ವಾರೆಂಟು ಹೊರಡಿಸಿರುತ್ತದೆ. ಈತನು ವಿದೇಶದಿಂದ ಬಂದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪೊಲೀಸ್ ನಿರೀಕ್ಷಕರಾದ ನಾಗೇಶ್ ಕೆ. ಹಾಗೂ ಪೊಲೀಸ್ ಉಪ ನಿರೀಕ್ಷಕರಾದ ಧನಂಜಯ್ ಹಾಗು ಲೋಲಾಕ್ಷ ರವರ ಮಾರ್ಗದರ್ಶನದಲ್ಲಿ ಮೊಹಮ್ಮದ್ ರಫೀಕ್ ನನ್ನು ಜೂ.13 ರಂದು ಕಾರ್ಕಳ ನಗರ ಠಾಣಾ ಪೊಲೀಸ್ ಸಿಬ್ಬಂದಿಗಳಾದ ರಮೇಶ್ ಹಾಗೂ ವಿಶ್ವಜಿತ್ ರವರು ಬ್ರಹ್ಮಾವರ ಪೊಲೀಸ್ ಠಾಣಾ ಸಿಬ್ಬಂದಿಯವರ ಸಹಾಯದೊಂದಿಗೆ ಬ್ರಹ್ಮಾವರ ಬೈಕಾಡಿಯಿಂದ ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು,ನ್ಯಾಯಾಲಯವು ಆರೋಪಿಗೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಿದ್ದು.ಈತನ ಮೇಲೆ ಹೆಬ್ರಿ ಠಾಣೆಯಲ್ಲಿ 1, ಬಜ್ಪೆ ಠಾಣೆಯಲ್ಲಿ 2 ದನ ಕಳ್ಳತನ ಪ್ರಕರಣ ಹಾಗು ಚಿಕ್ಕಮಗಳೂರಿನ ಲಿಂಗದಹಳ್ಳಿ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ಇದ್ದ ಮಾಹಿತಿ ತಿಳಿದು ಬಂದಿದೆ.