ಕುಡಿತದ ಚಟಕ್ಕಾಗಿ 6500 ಮೌಲ್ಯದ ಮೀನನ್ನು ಹೂವಿನ ವ್ಯಾಪಾರಿಗೆ 140 ರೂ ಗೆ ಮಾರಿದ ಕಳ್ಳ

ಕಾರ್ಕಳ : ಮೀನು ಮಾರುಕಟ್ಟೆಯಲ್ಲಿ ಮೀನು ಕಳವುಗೊಂಡಿದ್ದು, ಪ್ರಕರಣ ನಗರ ಠಾಣೆಯ ಮೆಟ್ಟಿಲೇರಿದೆ.ಮೀನು ವ್ಯಾಪಾರಿ ಮಾಲ ಎಂಬಾಕೆ ಮಾರುಕಟ್ಟೆಯಲ್ಲಿ ದಾಸ್ತಾನಿರಿಸಿದ ಸುಮಾರು 6.5 ಸಾವಿರ ರೂ. ಮೌಲ್ಯದ ಅಂಜಲ್ ಮೀನು ಕಳವುಗೊಂಡಿತ್ತು.
ಈ ಬಗ್ಗೆ ನಗರ ಠಾಣೆಗೆ ದೂರು ನೀಡಿದ್ದರು ಆರೋಪಿ ಸೂರಾಜ್ ಎಂಬಾತ ಕಳವು ನಡೆಸಿದ್ದು, ಹೂವಿನ ವ್ಯಾಪಾರಿ ವಿಶಾಲ್ ಎಂಬಾತನಿಗೆ ಕೇವಲ 140ರೂ.ಗೆ ಮಾರಾಟ ಮಾಡಿದ್ದ. ಬಳಿಕ ವಿಶಾಲ್ ಎಂಬಾತನನ್ನು ಠಾಣೆಗೆ ಕರೆಯಿಸಲಾಗಿದ್ದು, ಆತ ಮೀನಿನ ನಿಜವಾದ ಮೌಲ್ಯ ವನ್ನು ಮೀನು ವ್ಯಾಪಾರಿ ಮಾಲ ಎಂಬವರಿಗೆ ನೀಡಲು ಒಪ್ಪಿಕೊಂಡಿದ್ದಾನೆ. ಇದೀಗ 3 ಸಾವಿರ ರೂ. ಪಾವತಿಸಿ, ಉಳಿದ ಮೊತ್ತವನ್ನು ಜೂ.27ರಂದು ನೀಡುವುದಾಗಿ ಒಪ್ಪಿಕೊಂಡ ಬಳಿಕ, ಪ್ರಕರಣವನ್ನು ಪೊಲೀಸರು ರಾಜಿಯಲ್ಲಿ ಇತ್ಯರ್ಥಗೊಳಿಸಿದ್ದರು.