
ಕಾರ್ಕಳ: ತಾಲೂಕಿನ ಹಲವೆಡೆ ಸಿಡಿಲು,ಗಾಳಿ ಮಳೆಗೆ ಬಾರೀ ಹಾನಿ ಸಂಭವಿಸಿದೆ. ನೂರಾಳ್‌ಬೆಟ್ಟು ಗ್ರಾಮದ ಸದಾಶಿವ ಶೆಟ್ಟಿ ಎಂಬವರ ವಾಸ್ತವ್ಯದ ಮನೆಗೆ ಸಿಡಿಲು ಬಡಿದು 60 ಸಾವಿರ ರೂ. ನಷ್ಟ ಸಂಭವಿಸಿದೆ. ಸಾಣೂರು ಗ್ರಾಮದ ಮೊಂತಿನ ಡಿಸೋಜ ಎಂಬವರ ಅಡಕೆ ಮರಗಳಿಗೆ ಬೃಹದಾಕರದ ಮರ ಬಿದ್ದು 15 ಸಾವಿರ ರೂ. ನಷ್ಟವಾಗಿದೆ.