
ಹೈದರಾಬಾದ್: ಹೋಂವರ್ಕ್ ಮಾಡುವ ಸಂದರ್ಭದಲ್ಲಿ ಪೆನ್ನು ಚುಚ್ಚಿದ ಪರಿಣಾಮ 5 ವರ್ಷದ ಬಾಲಕಿ ಮೃತಪಟ್ಟ ಘಟನೆ ತೆಲಂಗಾಣದಲ್ಲಿ ವರದಿಯಾಗಿದೆ.
ಬಾಲಕಿ ರಿಯಾಂಶಿಕಾ ಯುಕೆಜಿ ಓದುತ್ತಿದ್ದು ,ಮನೆಯಲ್ಲಿ ಮಂಚದ ಮೇಲೆ ಕುಳಿತುಕೊಂಡು ಹೋಂವರ್ಕ್ ಮಾಡುತ್ತಿದ್ದಾಗ ಮಂಚದ ಮೇಲಿಂದ ಕೆಳಗೆ ಬಿದ್ದ ಸಂದರ್ಭ ಕೈಯಲ್ಲಿದ್ದ ಪೆನ್ನು ಆಕೆಯ ತಲೆಗೆ ಚುಚ್ಚಿದೆ. ಕೂಡಲೇ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಮೃತಪಟ್ಟಿದ್ದಾಳೆ ಎಂದು ವರದಿಯಾಗಿದೆ.