
ಕಾರ್ಕಳ/ಹೆಬ್ರಿ: ಹೆಬ್ರಿ ತಾಲೂಕಿನಲ್ಲಿ ಒಂಟಿ ಸಲಗವೊಂದು ಓಡಿಸುವ ಬಗ್ಗೆ ಸೀತಾನದಿ ಮೀನ ಪೂಜಾರಿ ಎಂಬವರ ಮನೆಯಲ್ಲಿ ನಾಗರಿಕರ ಸಮಿತಿ, ರೈತಸಂಘ ನೇತೃತ್ವದಲ್ಲಿ ಸ್ಥಳೀಯ ಗ್ರಾಮಸ್ಥರು ಬುಧವಾರ ಪ್ರತಿಭಟನೆ ನಡೆಸಿದರು.
ಕಳೆದ ನಾಲ್ಕು ದಿನಗಳ ಹಿಂದೆ ಒಂಟಿ ಸಲಗ ಹೆಬ್ರಿ ಆಗುಂಬೆ ವ್ಯಾಪ್ತಿಯ ಸೋಮೇಶ್ವರ ಅಭಯಾರಣ್ಯ ವ್ಯಾಪ್ತಿಯಲ್ಲಿ ಕಾಣಿಸಿಕೊಂಡಿರುವುದು ಸ್ಥಳೀಯರಿಗೆ ಹಾಗೂ ರಸ್ತೆಯಲ್ಲಿ ಸಾಗುವ ಜನರ ನಿದ್ದೆಗೆಡಿಸಿತ್ತು. ಹೆಬ್ರಿ ತಾಲೂಕಿನ ನಾಡಾಲು ನೆಲ್ಲಿಕಟ್ಟೆ ಮೀನಾ ಪೂಜಾರ್ತಿ ಎಂಬವರ ಮನೆ ಬಳಿ ಆನೆ ರಾತ್ರಿ ವೇಳೆಯಲ್ಲಿ ದಾಳಿಮಾಡಿದ್ದು, ಮರದಲ್ಲಿದ್ದ ಹಲಸು ಹಾಗೂ ತೆಂಗು ಬಾಳೆ ನಾಶಮಾಡಿತ್ತು.
ನಾಡ್ಪಾಲು ಗ್ರಾಮದ ಎಲ್ಲೆಡೆಗಳಲ್ಲಿ ಕಾಡಾನೆ ದಾಳಿಯು ನಿರಂತರವಾಗಿದ್ದು, ರೈತರು ಬೆಳೆದ ಕೃಷಿಯನ್ನೆಲ್ಲಾ ನಾಶ ಮಾಡುತ್ತಿದೆ. ಅಲ್ಲದೆ ವಾಸದ ಮನೆಯ ಬಳಿಯೇ ಕಾಡಾನೆ ಬರುತ್ತಿರುವುದರಿಂದ ಮನೆಯಿಂದ ಹೊರ ಬರುವುದಕ್ಕೂ ಜನ ಭಯ ಪಡುವಂತಾಗಿದೆ. ಕಾಡಾನೆಯ ಹಾವಳಿಯಿಂದ ರಕ್ಷಣೆಗಾಗಿ ಗ್ರಾಮಸ್ಥರೆಲ್ಲಾ ಒಟ್ಟಾಗಿ ಸಂಬಂಧಪಟ್ಟ ಇಲಾಖೆಗೆ ಮನವಿ ಮಾಡಿದರೂ ಸ್ಪಂದಿಸದ ಅಧಿಕಾರಿಗಳು ರೈತರಗಳ ಸಾವಿಗಾಗಿ ಕಾಯುತ್ತಿದ್ದೀರಾ ಎಂದು ಮುಟ್ಲುಪಾಡಿ ಸತೀಶ್ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಗತಿಪರ ನಾಗರಿಕ ಸೇವಾ ಸಮಿತಿ ಅಧ್ಯಕ್ಷ ಕೆರೆಬೆಟ್ಟು ಸಂಜೀವ ಶೆಟ್ಟಿ ಗುಲ್ತಾಡು ಭಾಸ್ಕರ್, ಕಿಸಾನ್ ಸಂಘದ ರಾಜೀವ್ ಶೆಟ್ಟಿ ನಾಡಾಲು ಗ್ರಾಮ ಪಂಚಾಯತ್ ಅಧ್ಯಕ್ಷರು, ಸದಸ್ಯರು, ಮಾಜಿ ಅಧ್ಯಕ್ಷ ದಿನೇಶ್ ಹೆಗ್ಡೆ,ಸತೀಶ್ ಶೆಟ್ಟಿ ಮುಟ್ಲುಪಾಡಿ,ಜಲಜ ಪೂಜಾರ್ತಿ, ರಮೇಶ್ ಶೆಟ್ಟಿ ವಿಜೇಂದ್ರ ಶೆಟ್ಟಿ ಸೀತಾನದಿ, ಸಂಜೀವ ನಾಯ್ಕ ಸೇರಿದಂತೆ ರೈತರು, ಗ್ರಾಮಸ್ಥರು ಪ್ರತಿಭಟನೆಯಲ್ಲಿ ಇದ್ದರು. ಈ ಸಂದರ್ಭ ಡಿವೈಎಸ್‌ಪಿ ಅರವಿಂದ ಕಲಗುಜ್ಜಿ ಹೆಬ್ರಿ ವಲಯ ಅರಣ್ಯ ಅಧಿಕಾರಿಗಳು ಮತ್ತು ವನ್ಯ ಜೀವಿ ವಿಭಾಗ ಅಧಿಕಾರಿಗಳು ಹಾಜರಿದ್ದು ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿ ಸಮಸ್ಯೆ ಪರಿಹರಿಸುವ ಭರವಸೆ ನೀಡಿದರು.ಕುದುರೆಮುಖ ವನ್ಯಜೀವಿ ವಿಭಾಗದ ಅರಣ್ಯಾಧಿಕಾರಿಗಳು, ಪೊಲೀಸ್ ಇಲಾಖೆ ಉನ್ನತಾಧಿಕಾರಿಗಳು, ಹೆಬ್ರಿ ಠಾಣೆ ಸಿಬ್ಬಂದಿಗಳು ಉಪಸ್ಥಿತರಿದ್ದರು.
