24.9 C
Udupi
Friday, March 21, 2025
spot_img
spot_img
HomeBlogಹಿರಿಯ ನಾಯಕ, ಮಾಜಿ ಸಚಿವ ಸಿ.ಟಿ ರವಿಯವರ ಮೇಲೆ ಹಲ್ಲೆ ಯತ್ನ, ಖಂಡನೀಯ

ಹಿರಿಯ ನಾಯಕ, ಮಾಜಿ ಸಚಿವ ಸಿ.ಟಿ ರವಿಯವರ ಮೇಲೆ ಹಲ್ಲೆ ಯತ್ನ, ಖಂಡನೀಯ

ರಾಜ್ಯದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ನಿರ್ಮಾಣ…?

ರವೀಂದ್ರ ಮೊಯ್ಲಿ, ಬಿಜೆಪಿ ವಕ್ತಾರ ಕಾರ್ಕಳ


ವಿಧಾನಸಭೆ ಮತ್ತು ವಿಧಾನ ಪರಿಷತ್ತಿನ ಕಲಾಪಗಳು ನಡೆಯುತ್ತಿರುವ ಸಂದರ್ಭದಲ್ಲಿ ಅಲ್ಲಿನ ಸದಸ್ಯರುಗಳು ಸಂಪೂರ್ಣವಾಗಿ ಸ್ಪೀಕರ್ ರವರ ಅಧೀನದಲ್ಲಿರುತ್ತಾರೆ. ಈ ಬಗ್ಗೆ ಬಾಬಾ ಸಾಹೇಬ್ ಅಂಬೇಡ್ಕರ್ ನೇತೃತ್ವದಲ್ಲಿ ರಚಿತಗೊಂಡ ಭಾರತದ ಸಂವಿಧಾನಲ್ಲಿ ಉಲ್ಲೇಖಿಸಲಾಗಿದೆ.


ಸಂವಿಧಾನದ ಪರಿಚ್ಛೇದ 194(2)ರ ಅಡಿಯಲ್ಲಿ ಕಲಾಪದಲ್ಲಿ ಆಡಿದ ಮಾತುಗಳಿಗೆ ನ್ಯಾಯಾಲಯದಲ್ಲಿ ಪ್ರಶ್ನಿಸುವಂತಿಲ್ಲ.ಕಲಾಪದಲ್ಲಿ ಆಡಬಹುದಾದ ಮತ್ತು ಆಡಬಾರದ ಮತು ಮತ್ತು ಪದ ಬಳಗೆ ಬಗ್ಗೆ ನಿಯಮ ಪುಸ್ತಕದಲ್ಲಿ ತಿಳಿಸಲಾಗಿರುತ್ತದೆ.ಈ ಬಗ್ಗೆ ನಿಯಮ ಮೀರಿದರೆ ಕ್ರಮ ಕೈಗೊಳ್ಳುವ ಅಧಿಕಾರ ಸ್ಪೀಕರ್ ರವರಿಗೆ ಸಂವಿಧಾನದತ್ತವಾಗಿ ಇದೆ. ಆದಾಗ್ಯೂ ಭಾರತೀಯ ಜನತಾ ಪಾರ್ಟಿಯ ಹಿರಿಯ ನಾಯಕ ಮಾಜಿ ಸಚಿವರಾದ ಶ್ರೀ ಸಿ. ಟಿ. ರವಿ ಯವರ ಮೇಲೆ ಕಾಂಗ್ರೆಸ್ ಪುಡಿರೌಡಿಗಳು ಸುವರ್ಣ ಸೌಧದೊಳಗೆ ನುಗ್ಗಿ ಹಲ್ಲೆ ಯತ್ನ ನಡೆಸಿರುವುದು ಖಂಡನೀಯ.‌ ಎಂದು ಕಾರ್ಕಳ ಬಿಜೆಪಿ ವಕ್ತಾರ ರವೀಂದ್ರ ಮೊಯ್ಲಿ ತಿಳಿಸಿದ್ದಾರೆ.


ಆರೋಪ ಬಂದ ಕೂಡಲೇ ಶಾಸನಬದ್ದವಾಗಿ ಚುನಾಯಿಸಲ್ಲಟ್ಟ ಶಾಸಕನ ಶಾಸನಬದ್ಧ ಹಕ್ಕುಗಳನ್ನು ಮೊಟಕುಗೊಳಿಸಿ, ವಿಧಾನ ಪರಿಷತ್ ಅಧಿವೇಶನದ ನಡುವೆಯೇ ವಿಧಾನಸೌಧದ ವ್ಯಾಪ್ತಿಯೊಳಗೆ ನಿಯಮ ಬಾಹಿರವಾಗಿ ಬಂಧಿಸಿರುವ ಸರ್ಕಾರದ ನಡೆ ದೇಶದ ನ್ಯಾಯಾಂಗ ವ್ಯವಸ್ಥೆಗೆ ಮಾಡಿದ ಅಪಮಾನ ಶಾಸಕರು ನಡೆನುಡಿಯಲ್ಲಿ ತಪ್ಪಾಗಿದ್ದರೆ ಅದನ್ನು ಸಂವಿಧಾನದಬದ್ದವಾಗಿ ಮತ್ತು ಕಾನೂನಿನ ಚೌಕಟ್ಟಿನಲ್ಲಿ ವ್ಯವಹರಿಸಿ,‌‌ ಪರಿಹಾರ ಕಂಡುಕೊಕೊಳ್ಳಬೇಕಿತ್ತು. ಕಾರ್ಯಕರ್ತರನ್ನು ಛೂ ಬಿಟ್ಟು ಗೂಂಡಾಗಿರಿ ನಡೆಸುವುದು, ಶಾಸಕರ ಹಕ್ಕುಗಳನ್ನು ಹತ್ತಿಕ್ಕಿ ಬಂಧಿಸಿರುವುದು ರಾಜಕೀಯ ದ್ವೇಷದ ಪರಮಾವಧಿಯಾಗಿದೆ. ಸರ್ಕಾರದ ಈ ನಡವಳಿಕೆಯನ್ನು ಕಾರ್ಕಳ ಬಿಜೆಪಿಯು ಖಂಡಿಸುತ್ತದೆ ಎಂದಿದ್ದಾರೆ.

spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page