
ಹಿಂದೂ ವಿವಾಹ ಕಾಯ್ದೆಯಡಿ ಸೂಚಿಸಲಾದ ಸಾಂಪ್ರದಾಯಿಕ ಆಚರಣೆಗಳು ಮತ್ತು ಸಮಾರಂಭಗಳು ಶ್ರದ್ಧೆಯಿಂದ, ಕಟ್ಟುನಿಟ್ಟಾಗಿ ಮತ್ತು ಧಾರ್ಮಿಕವಾಗಿರಬೇಕು. ಒಂದು ವೇಳೆ ಇವುಗಳನ್ನು ಅನುಸರಿಸಲು ವಿಫಲವಾದರೆ ಆ ಮದುವೆಯನ್ನು ನೋಂದಾಯಿಸಿದ ನಂತರವೂ ಅಮಾನ್ಯವೆಂದು ಘೋಷಿಸಲಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಕಟ್ಟುನಿಟ್ಟಾಗಿ ಆದೇಶಿಸಿದೆ.
ನ್ಯಾಯಮೂರ್ತಿಗಳಾದ ಬಿವಿ ನಾಗರತ್ನ ಮತ್ತು ಅಗಸ್ಟಿನ್ ಜಾರ್ಜ್ ಮಸಿಹ್ ಅವರ ಪೀಠವು ಈ ಆದೇಶವನ್ನು ನೀಡಿದ್ದು ಮದುವೆಯ ಸಿಂಧುತ್ವಕ್ಕಾಗಿ ಇದೆಲ್ಲವನ್ನು ಅನುಸರಿಸಬೇಕು. ಒಂದು ವೇಳೆ ಇದನ್ನು ಪಾಲಿಸದಿದ್ದರೆ, ಕಾನೂನಿನ ದೃಷ್ಟಿಯಲ್ಲಿ ಮದುವೆಯನ್ನು ಮಾನ್ಯವೆಂದು ಪರಿಗಣಿಸಲಾಗುವುದಿಲ್ಲ. ಸೆಕ್ಷನ್ 7 ಹೇಳುವಂತೆ ಹಿಂದೂ ವಿವಾಹವನ್ನು ಯಾವುದೇ ಸಾಂಪ್ರದಾಯಿಕ ವಿಧಿಗಳು ಮತ್ತು ಸಮಾರಂಭಗಳಿಗೆ ಅನುಗುಣವಾಗಿ ನಡೆಸಬಹುದು ಎಂದು ಹೇಳಿದೆ.ಹಿಂದೂ ವಿವಾಹವು ‘ಸಂಸ್ಕಾರ’ ಮತ್ತು ಭಾರತೀಯ ಸಮಾಜಕ್ಕೆ ಒಂದು ಶೋಭೆಯನ್ನು ತರುವ ಮೌಲ್ಯಯುತವಾದ ಸಂಸ್ಕಾರವಾಗಿದೆ. ಸುಪ್ರೀಂ ಕೋರ್ಟ್ ಈ ಆದೇಶವನ್ನು ನೀಡಲು ಕಾರಣವೇನೆಂದರೆ ಇಬ್ಬರು ದಂಪತಿಗಳ ವಿವಾಹ ಮಾನ್ಯವಾಗಿದ್ದರು. ಅವರು ಹಿಂದೂ ಧರ್ಮದ ಸಂಪ್ರದಾಯದಂತೆ ಮದುವೆಯಾಗಿಲ್ಲ. ಅದಕ್ಕಾಗಿ ಅವರ ವಿಚ್ಛೇದನ ಪ್ರಕರಣದ ವಿಚಾರಣೆಯನ್ನು ತಡೆಹಿಡಿದಿದೆ. ಈ ವಿಚಾರಣೆ ವೇಳೆ ಕೋರ್ಟ್ ವಿವಾಹ ಕಾಯ್ದೆ ಹಾಗೂ ಕಾನೂನಿ ಪ್ರಕಾರ ಹಿಂದೂ ವಿವಾಹ ಹೇಗಿರಬೇಕು ಎಂದು ಹೇಳಿದೆ. ಯುವಕರು ಮತ್ತು ಯುವತಿಯರು ಮದುವೆ ಮಾಡಿಕೊಳ್ಳುವ ಮೊದಲು ವಿವಾಹದ ಸಂಪ್ರಾದಾಯಗಳನ್ನು ಹಾಗೂ ಅದರ ಕಟ್ಟುಪಾಡುಗಳನ್ನು ತಿಳಿದುಕೊಳ್ಳಬೇಕು ಹಾಗೂ ಅದರ ಬಗ್ಗೆ ಯೋಚನೆ ಮಾಡಬೇಕು ಎಂದು ವಿವರವಾಗಿ ಹೇಳಿದ್ದಾರೆ.ಮದುವೆ ಎನ್ನುವುದು, ಹಾಡು, ಡ್ಯಾನ್ಸ್, ಊಟ, ಮಾತ್ರವಲ್ಲ ಹಾಗೂ ಒತ್ತಡದಿಂದ ವರದಕ್ಷಿಣೆ ನೀಡುವುದು ಸರಿಯಲ್ಲ, ಇದು ಕೊನೆಗೆ ಕ್ರಿಮಿನಲ್ ಮೊಕದ್ದಮೆ ಕಾರಣವಾಗುತ್ತದೆ. ಮದುವೆ ಎನ್ನುವುದು ವ್ಯಾಪಾರವಲ್ಲ, ಇದು ಭಾರತೀಯ ಸಮಾಜದ ಮೂಲ ಹಾಗೂ ಮುಂದಿನ ನಿಮ್ಮ ವಿಕಸಿತ ಕುಟುಂಬಕ್ಕೆ ಸ್ಥಾನಮಾನ ನೀಡುವ ಹಾದಿಯಾಗಿದ್ದು ಹಾಗಾಗಿ ಈ ಬಗ್ಗೆ ಒಂದು ಬಾರಿ ಯೋಚನೆ ಮಾಡಿ ನಿರ್ಧಾರ ಕೈಗೊಳ್ಳಿ ಎಂದು ಪೀಠವು ತಿಳಿಸಿದೆ.