5ನೇ ಹಂತದ ಗೋವಿಗಾಗಿ ಮೇವು ಕಾರ್ಯಕ್ರಮ ಯಶಸ್ವಿ

ಸ್ವಚ್ಛ ಕಾರ್ಕಳ ಬ್ರಿಗೇಡ್ ವತಿಯಿಂದ, ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ (ರಿ.), ಕಾರ್ಕಳ ಅವರ ಪ್ರಾಯೋಜಕತ್ವದಲ್ಲಿ ನಡೆಯುತ್ತಿರುವ “ಗೋವಿಗಾಗಿ ಮೇವು” ಅಭಿಯಾನದ 5ನೇ ಹಂತ ಇಂದು ಯಶಸ್ವಿಯಾಗಿ ಪೂರ್ಣಗೊಂಡಿತು.

📅 ದಿನಾಂಕ: 02 ಆಗಸ್ಟ್ 2026
🕡 ಸಮಯ: ಬೆಳಗ್ಗೆ 6:30 ರಿಂದ 8:30 ರವರೆಗೆ
📍 ಸ್ಥಳ: ಕಾರ್ಕಳದ ಶ್ರೀ ಗುರುರಾಘವೇಂದ್ರ ಮಠದ ಹಿಂಭಾಗ
ಈ ಅಭಿಯಾನದಲ್ಲಿ ಸ್ವಚ್ಛ ಕಾರ್ಕಳ ಬ್ರಿಗೇಡ್‌ನ ಸುಮಾರು 15 ಮಂದಿ ಸದಸ್ಯರು ಉತ್ಸಾಹದಿಂದ ಭಾಗವಹಿಸಿ, ಸುಮಾರು 15 ಸೆಂಟ್ಸ್ ಪ್ರದೇಶದಲ್ಲಿ ನೇಪಿಯರ್ ಹುಲ್ಲನ್ನು ನೆಡುವ ಕಾರ್ಯವನ್ನು ಯಶಸ್ವಿಯಾಗಿ ನೆರವೇರಿಸಿದರು.

























































