
ಬೆಂಗಳೂರು: ಈಗಾಗಲೇ ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧನದಲ್ಲಿರುವ ವಿಧಾನಪರಿಷತ್ ಸದಸ್ಯ ಸೂರಜ್ ರೇವಣ್ಣ ಅಮಾವಾಸ್ಯೆಯ ದಿನ ಸೀರೆ ಉಟ್ಟು, ಬಳೆ ತೊಡುತ್ತಾರೆ ಎಂಬ ಅಚ್ಚರಿಯ ಹೇಳಿಕೆಯನ್ನು ಸಂತ್ರಸ್ತ ಯುವಕ ನೀಡಿದ್ದಾರೆ ಎಂದು ವರದಿಯಾಗಿದೆ.
ಈ ಕುರಿತು ವಿವರಿಸಿದ ಸಂತ್ರಸ್ತ ಯುವಕ 2019ರ ಚುನಾವಣೆ ಸಂದರ್ಭದಲ್ಲಿ ಸೂರಜ್ ರೇವಣ್ಣ ಅವರನ್ನು ಭೇಟಿ ಮಾಡಿದ್ದು ನನ್ನ ಫೋನ್ ನಂಬರನ್ನು ತೆಗೆದುಕೊಂಡು ವಿಸಿಟಿಂಗ್ ಕಾರ್ಡ್ ಕೊಟ್ಟಿದ್ದರು. ನನ್ನ ಜೊತೆಗೆ ದೂರವಾಣಿಯಲ್ಲಿ ಮಾತನಾಡುತ್ತಿದ್ದ ಸೂರಜ್ ರೇವಣ್ಣ ಗುಡ್ ಇವಿನಿಂಗ್ ಎಂಬ ಮೆಸೇಜ್ ಜೊತೆಗೆ ಲವ್ ಸಿಂಬಲ್ ಕಳುಹಿಸಿ ಮಾತು ಆರಂಭಿಸಿದರು. ಬಳಿಕ ಫಾಮ್ ಹೌಸ್ ಗೆ ಕರೆಸಿಕೊಂಡು ಬಲತ್ಕಾರದಿಂದ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಹೇಳಿದ್ದಾರೆ.
ನಾಲ್ಕು ವರ್ಷದಿಂದ ಇದನ್ನೆಲ್ಲೂ ಹೇಳಿಕೊಳ್ಳೋಕೆ ನನಗೆ ಆಗಿರಲಿಲ್ಲ. ಒಂದು ದಿನ ಸೂರಜ್ ರೇವಣ್ಣ ನನ್ನ ಜೊತೆಗೆ ಮಾತನಾಡುತ್ತಾ ನನ್ನ ಜೀವನದ ಬಗ್ಗೆ ಕೇಳಿದರು. ನಾನು ನನ್ನ ಕೆಲಸ ಕುಟುಂಬದ ಬಗ್ಗೆ ಹೇಳಿದಾಗ ಯಾವುದಕ್ಕೂ ಯೋಚನೆ ಮಾಡಬೇಡ ನಾನಿದ್ದೇನೆ ಎಂದು ರೂಮು ಒಳಗೆ ಕರೆದುಕೊಂಡು ಹೋದರು ಬಳಿಕ ನನ್ನ ಕಾಲು ಒತ್ತುವಂತೆ ಕೇಳಿದಾಗ ನಾನು ಕಾಲು ಒತ್ತಿದೆ. ಮುಂದೆ ಏನಾಯ್ತು ಎಂದು ಹೇಳಲು ನನ್ನಿಂದ ಸಾಧ್ಯವಿಲ್ಲ. ಈ ಕೃತ್ಯದಿಂದ ನಾನು ಮಾನಸಿಕ ಖಿನ್ನತೆಗೆ ಒಳಗಾಗಿದ್ದೆ. ಈ ವಿಚಾರ ಎಲ್ಲಿಯೂ ಹೇಳದಂತೆ ಎರಡು ಕೋಟಿ ರೂ ಹಾಗೂ ಕೆಲಸದ ಆಮೀಷ ಒಡ್ಡಿದ್ದರೂ ನಾನು ಒಪ್ಪದೇ ಇದ್ದಾಗ ಜೀವ ಬೆದರಿಕೆಯನ್ನೂ ಹಾಕಿದ್ದರು ಎಂದು ಸಂತ್ರಸ್ತ ಯುವಕ ವಿವರಣೆ ನೀಡಿದ್ದಾನೆ