
ಜೆಸಿಐ ಉಪ್ಪುಂದದ ವತಿಯಿಂದ ಕಳೆದ 27 ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ನಿಷ್ಠೆಯಿಂದ ಸೇವೆ ಸಲ್ಲಿಸುತ್ತಿದ್ದು ಪ್ರಸ್ತುತ ಕಾಪು ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಬಿಜೂರಿನ ಸುಧಾಕರ್ ದೇವಾಡಿಗ ಇವರಿಗೆ ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ ಪುರಸ್ಕಾರ ನೀಡಿ ಗೌರವಿಸಲಾಯಿತು.
ಜೆಸಿಐ ಉಪ್ಪುಂದದ ಅಧ್ಯಕ್ಷರಾದ ಜೇಸಿ ಮಂಜುನಾಥ್ ದೇವಾಡಿಗ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.ಪೂರ್ವಾಧ್ಯಕ್ಷರಾದ ಜೇಸಿ ಉದಯ್ ಡಿ.ಆರ್.ವೇದಿಕೆಗೆ ಅತಿಥಿಗಳನ್ನು ಆಹ್ವಾನಿಸಿ ಕಾರ್ಯಕ್ರಮದ ನಿರ್ದೇಶಕರಾದ ಜೇಸಿ ಸಂತೋಷ್ ಸ್ವಾಗತಿಸಿದರು.ಜೆಜೇಸಿ ಅಧ್ಯಕ್ಷೆ ಸಂಜನಾ ದೇವಾಡಿಗ ಜೇಸಿವಾಣಿ ವಾಚಿಸಿದರು,ಪೂರ್ವಾದ್ಯಕ್ಷರಾದ ಜೇಸಿ ಪುರುಷೋತ್ತಮದಾಸ್ ಧನ್ಯವಾದಗೈದರು.