
ಕಾರ್ಕಳ : ಸಿ.ಬಿ.ಎಸ್.ಇ.10ನೇ ತರಗತಿ ಬೋರ್ಡ್ ಪರೀಕ್ಷೆಯಲ್ಲಿ ಕಾರ್ಕಳದ ಶ್ರೀ ಭುವನೇಂದ್ರ ರೆಸಿಡೆನ್ಶಿಯಲ್ ಶಾಲೆಯು ಸತತ 20ನೇ ಬಾರಿಗೆ ಶೇಕಡ 100 ಫಲಿತಾಂಶವನ್ನು ದಾಖಲಿಸಿದೆ.
ವಿದ್ಯಾರ್ಥಿಗಳಾದ ಭುವನ್ ಎಸ್. ಕಾಮತ್ ಶೇ. 94.8, ಗೀತಾ ಶೆಣೈ ಶೇ.92.2, ಆಶಯ್ ಜೈನ್ ಶೇ. 91.8, ರಿಷಿತ್ ರಾಜ್ ಶೇ. 91.6, ತನ್ನಿ ಹೆಗ್ಡೆ ಶೇ. 90.6, ಗಾಯನ ಶ್ರೀ ಶೇ. 90 ಹಾಗೂ ಸಮರ್ಥ ಕೆ. ಎಲ್. ಶೇ. 90 ಪಡೆದಿರುತ್ತಾರೆ.
ಪರೀಕ್ಷೆಗೆ ಹಾಜರಾದ ಒಟ್ಟು 74 ವಿದ್ಯಾರ್ಥಿಗಳಲ್ಲಿ 13 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ, 40 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಹಾಗೂ 17 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.