
ಬೆಂಗಳೂರು: ಸಿಎಂ ಸಿದ್ದರಾಮಯ್ಯನವರ ಕನಸಿನ ಯೋಜನೆ ಅನ್ನಭಾಗ್ಯಕ್ಕೆ ಕೇಂದ್ರದಿಂದ 2.36 ಲಕ್ಷ ಟನ್ ಅಕ್ಕಿ ಸಿಗುತ್ತಿದೆ ಎಂದು ಖುಷಿ ಪಡುವ ಹೊತ್ತಿಗೆ ಮತ್ತೆ ಅಕ್ಕಿಯ ಕೊರತೆ ಎದುರಾಗಿದ್ದು, ಅಕ್ಕಿಗಾಗಿ ಮತ್ತೆ ಆಹಾರ ನಾಗರೀಕ ಸರಬರಾಜು ಇಲಾಖೆಯ ಸಚಿವರು ಕೇಂದ್ರ ಸಚಿವರನ್ನ ಭೇಟಿ ಮಾಡಿ ಚರ್ಚಿಸಲು ನಿರ್ಧರಿಸಿದ್ದಾರೆ.
ಆಹಾರ ನಾಗರೀಕ ಸರಬರಾಜು ಇಲಾಖೆಯು ಈ ತಿಂಗಳು ಡಿಬಿಟಿ ಹಣದ ಬದಲು ಅಕ್ಕಿಯನ್ನೆ ಕೊಡಲು ನಿರ್ಧರಿಸಿದ್ದು ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ. ಒಂದೂವರೆ ಕೋಟಿ ಬಿಪಿಎಲ್ ಫಲಾನುಭವಿಗಳ ಪೈಕಿ 13 ಲಕ್ಷದ 45 ಸಾವಿರ ಫಲಾನುಭವಿಗಳಿಗೆ ಅಕ್ಕಿಯ ಕೊರತೆ ಎದುರಾಗಿದೆ.
ಹೀಗಾಗಿ ಮತ್ತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಸಚಿವರನ್ನ ಭೇಟಿಯಾಗಲು ಆಹಾರ ನಾಗಾರೀಕ ಸರಬರಾಜು ಇಲಾಖೆ ಮುಂದಾಗಿದ್ದು, 2.36 ಲಕ್ಷ ಟನ್ ಅಕ್ಕಿಯ ಜೊತೆಗೆ ಮತ್ತೆ 20% ರಷ್ಟು ಹೆಚ್ಚು ಅಕ್ಕಿಯನ್ನ ಕೇಂದ್ರ ಸರ್ಕಾರ ಕೊಟ್ರೆ ಸೆಪ್ಟೆಂಬರ್ ತಿಂಗಳಿನಿಂದಲೇ ಅನ್ನಭಾಗ್ಯದ 5 ಕೆಜಿ ಅಕ್ಕಿಭಾಗ್ಯವು ಆರಂಭವಾಗಲಿದೆ.













