ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಕೇಸಲ್ಲಿ, ಕ್ಲೋಸರ್ ರಿಪೋರ್ಟ್ ಸಲ್ಲಿಸಿದ ಸಿಬಿಐ

2020ರಲ್ಲಿ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಜೂನ್ ತಮ್ಮ ಮನೆಯಲ್ಲಿ ನೇಣಿಗೆ ಶರಣಾಗಿದ್ದು ಆಗಿನಿಂದ ಈ ಕೇಸ್ ನ ತನಿಖೆ ಮುಂದುವರೆದಿದೆ. ಇದೀಗ ಸುಶಾಂತ್ ಕೇಸ್ ತನಿಖೆ ಮಾಡುತ್ತಿರುವ ಸಿಬಿಐ ಮುಂಬೈ ಕೋರ್ಟಲ್ಲಿ ಕ್ಲೋಸರ್ ರಿಪೋರ್ಟ್ ಸಲ್ಲಿಸಿದೆ ಎಂದು ಸುದ್ದಿಯಾಗುತ್ತಿದೆ.
ಈ ಕೇಸಲ್ಲಿ ನಟಿ ರಿಯಾ ಚಕ್ರವರ್ತಿ ಹೆಸರು ಜಾಸ್ತಿ ಕೇಳಿ ಬಂದಿದ್ದು ಇದೀಗ ಅವರಿಗೂ ಕ್ಲೀನ್ ಚಿಟ್ ಸಿಕ್ಕಿದೆ. ರಾಜಶೇಖರ್ ಝಾ ವರದಿ ಪ್ರಕಾರ, ಸುಶಾಂತ್ ಸಾವಿನ ತನಿಖೆಯನ್ನು ನಾಲ್ಕೂವರೆ ವರ್ಷ ಆದಮೇಲೆ ಸಿಬಿಐ ಮುಗಿಸಿದೆ ಎಂದು ತಿಳಿಸಲಾಗಿದೆ.
ವರದಿಗಳ ಪ್ರಕಾರ, ತನಿಖಾ ಸಂಸ್ಥೆ ಎರಡು ಕೇಸ್‌ಗಳಲ್ಲಿ ಕ್ಲೋಸರ್ ರಿಪೋರ್ಟ್ ಹಾಕಿದ್ದು ಒಂದು ಕೇಸ್ ಆಗಸ್ಟ್ 2021ರಲ್ಲಿ ಸುಶಾಂತ್ ಸಿಂಗ್ ರಜಪೂತ್ ತಂದೆ ರಿಯಾ, ಆಕೆಯ ಕುಟುಂಬದವರು ಮತ್ತೆ ಕೆಲವರ ವಿರುದ್ಧ ಪಟ್ನಾದಲ್ಲಿ ದಾಖಲಿಸಿದ್ದರು. ಇನ್ನೊಂದು ಕೇಸ್ ಸೆಪ್ಟೆಂಬರ್‌ನಲ್ಲಿ ರಿಯಾ, ಸುಶಾಂತ್ ತಂಗಿ ಮತ್ತೆ ಡಾಕ್ಟರ್ ವಿರುದ್ಧ ಹಾಕಿದ್ದರು. ಎರಡು ಕೇಸ್‌ಗಳ ಕ್ಲೋಸರ್ ರಿಪೋರ್ಟ್ ಮುಂಬೈನ ಸ್ಪೆಷಲ್ ಕೋರ್ಟಿಗೆ ಸಲ್ಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಸಿಬಿಐ ತನಿಖೆ ಪ್ರಕಾರ ಸುಶಾಂತ್ ಸಾವಿಗೆ ಯಾರೂ ಕಾರಣ ಅಲ್ಲ ಎಂದು ವರದಿ ನೀಡಿದೆ.
ರಿಯಾ ಚಕ್ರವರ್ತಿ ವಕೀಲ ಸತೀಶ್ ಮಾನೆಶಿಂಧೆ ಮಾತನಾಡಿ, ‘ರಿಯಾ ಸುಮ್ಮನೆ ಕಷ್ಟ ಅನುಭವಿಸಿದಳು. ತಪ್ಪಿಲ್ಲದೇ 27 ದಿನ ಜೈಲಲ್ಲಿ ಇದ್ದು ಅವಳು ಮತ್ತೆ ಆಕೆಯ ಕುಟುಂಬ ಮೌನವಾಗಿದ್ದರೂ ಅಮಾನವೀಯವಾಗಿ ನಡೆದುಕೊಂಡರು. ಮುಗ್ದ ಜನರನ್ನು ಮೀಡಿಯಾ ಮತ್ತೆ ತನಿಖಾಧಿಕಾರಿಗಳ ಮುಂದೆ ತೊಂದರೆ ಕೊಟ್ಟರು. ಇದು ಯಾವ ಕೇಸಲ್ಲೂ ರಿಪೀಟ್ ಆಗಬಾರದು ಎಂದು ಬಯಸುತ್ತೇನೆ. ನಾಲ್ಕು ವರ್ಷ ತನಿಖೆ ಆದಮೇಲೆ ಸಿಬಿಐ ಕ್ಲೋಸರ್ ರಿಪೋರ್ಟ್ ಸಲ್ಲಿಸಿದೆ. ರಿಯಾ ಮತ್ತೆ ಆಕೆಯ ಕುಟುಂಬಕ್ಕೆ ಕ್ಲೀನ್ ಚಿಟ್ ಸಿಕ್ಕಿದೆ ಅಂತಾ ರಿಪೋರ್ಟ್ ಹೇಳಿದೆ. ಸುಶಾಂತ್‌ಗೆ ಯಾರೋ ಸಾಯೋಕೆ ಪ್ರೇರೇಪಿಸಿದರು, ಎಂದು ಹೇಳೋಕೆ ಸಿಬಿಐಗೆ ಯಾವ ಸಾಕ್ಷಿನೂ ಸಿಕ್ಕಿಲ್ಲ” ಎಂಬುದನ್ನು ತಿಳಿಸಿದರು.