
ಸಾಮಾಜಿಕ ಜಾಲತಾಣದಿಂದ ಕೌಟುಂಬಿಕ ಸಂಬAಧಗಳು ಇಂದು ಬಿರುಕು ಬಿಟ್ಟಿವೆ. ಹದಿಹರೆಯ, ವ್ಯಕ್ತಿತ್ವ ರೂಪಿಸುವ ಸಂಕ್ರಮಣ ಕಾಲ. ಇಂತಹ ಸಂದರ್ಭದಲ್ಲೇ ಜೀವನ ಮೌಲ್ಯಗಳನ್ನು ಬಿತ್ತುವ ಮೌಲ್ಯಸುಧಾದ ಮೂಲಕ ಕೌಟುಂಬಿಕ, ಬದುಕಿನ ಪ್ರೀತಿಯನ್ನು ತುಂಬುತ್ತಿರುವ ವಿದ್ಯಾರ್ಥಿಗಳ ಬದುಕಿಗೆ ಬೆಳಕಾದ, ವಿಭಿನ್ನ ರೀತಿಯಲ್ಲಿ ಶಿಕ್ಷಣದ ಪರಂಪರೆಗೆ ಕೊಡುಗೆ ನೀಡುತ್ತಿರುವ ಕಾರ್ಕಳದ ಹೆಮ್ಮೆ ಜ್ಞಾನಸುಧಾವಾಗಿದೆ ಎಂದು ತರಂಗ ವಾರಪತ್ರಿಕೆಯ ಸಂಪಾದಕಿ ಡಾ.ಯು.ಬಿ. ರಾಜಲಕ್ಷ್ಮಿ ಹೇಳಿದ್ದಾರೆ.
ಅವರು ಕಾರ್ಕಳ ಜ್ಞಾನಸುಧಾ ಪ.ಪೂ. ಕಾಲೇಜಿನ ವಾರ್ಷಿಕೋತ್ಸವ ಜ್ಞಾನಸಂಭ್ರಮ-2024ರ ಮುಖ್ಯ ಅತಿಥಿಯಾಗಿ ಮಾತನಾಡಿದರು.ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನ ನಿವೃತ್ತ ಸಹಾಯಕ ಪ್ರಧಾನ ವ್ಯವಸ್ಥಾಪಕ ಬಿ. ಶೇಖರ್ ಶೆಟ್ಟಿ ಮಾತನಾಡಿ, ವ ಕಾರಗಳಾದ ವಟು, ವಸನ, ವಿದ್ಯೆ, ವಿನಯ ಮತ್ತು ವಕಾರ ವಿಕಾರವಾಗದೆ ಸಾಕಾರಾವಾದರೆ ಶ್ರೇಷ್ಟ ವ್ಯಕ್ತಿಗಳಾಗಲು ಸಾಧ್ಯ. ಯೋಜನೆ ಮತ್ತು ಸ್ವಯಂ ಮೌಲ್ಯಮಾಪನ ನಮ್ಮಲ್ಲಿರ ಬೇಕು ಎಂದರು.ಅಜೆಕಾರ್ ಪದ್ಮಗೋಪಾಲ್ ವಿದ್ಯಾಸಂಸ್ಥೆಯ ಅಧ್ಯಕ್ಷ ಡಾ. ಸುಧಾಕರ್ ಶೆಟ್ಟಿ ಮಾತನಾಡಿ, ಸಂಸ್ಥೆ ನಡೆಸಲು ಹುದ್ದೆ ಮುಖ್ಯವಲ್ಲ. ಮನಸು ಮುಖ್ಯ. ಸಂಖ್ಯೆ ಮುಖ್ಯವಲ್ಲ ಸಂಕಲ್ಪ ಮುಖ್ಯ. ಅಂತಹ ಬೋಧಕ ಮತ್ತು ಬೋಧಕೇತರ ಸಿಬ್ಬಂದಿವರ್ಗದ ಸೇವೆಯಿಂದ ಧನ್ಯನಾಗಿದ್ದೇನೆ.

ವಿದ್ಯಾರ್ಥಿಗಳು ಇಲ್ಲಿ ಆಗಮಿಸಿದ ಮುಖ್ಯ ಅತಿಥಿಗಳ ಸಂದೇಶವನ್ನು ಕೇಳಿ ಜೀವನದಲ್ಲಿ ಅಳವಡಿಸಿಕೊಂಡಾಗ ನಮ್ಮ ಕಾರ್ಯ ಸಾರ್ಥಕ ಎಂದರು.ಗೌರವ ಸನ್ಮಾನ: ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಲು ಇಚ್ಚಿಸುವವರಿಗೆ ರಾಷ್ಟçಮಟ್ಟದಲ್ಲಿ ನ್ಯಾಶನಲ್ ಡಿಫೆನ್ಸ್ ಅಕಾಡೆಮಿ ಮತ್ತು ನೇವಲ್ ಅಕಾಡೆಮಿಯ ಪ್ರವೇಶಕ್ಕಾಗಿ ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ ನಡೆಸಿದ ಎನ್.ಡಿ.ಎ ಲಿಖಿತ ಪರೀಕ್ಷೆಯಲ್ಲಿತೇರ್ಗಡೆಗೊಂಡ ರಾಜೇಂದ್ರ ಕೆ.ವಿ ಮತ್ತುಕೀರ್ತನಾ ಬಿ.ಡಿ. ದಂಪತಿಗಳ ಸುಪುತ್ರ ಸಂಸ್ಥೆಯ ದ್ವಿತೀಯ ವಿಜ್ಞಾನ ವಿಭಾಗದ ಸರ್ವಜಿತ್ ಕೆ.ಆರ್. ಅವರನ್ನು ಸಂಸ್ಥೆಯ ವತಿಯಿಂದ ಗೌರವಿಸಲಾಯಿತು.ವಿದ್ಯಾರ್ಥಿಗಳಿಂದ ನೆರವು: ಕಾರ್ಕಳ ಜ್ಞಾನಸುಧಾ ಪ.ಪೂ.ಕಾಲೇಜಿನ ವಾರ್ಷಿಕೋತ್ಸವ ಜ್ಞಾನಸಂಭ್ರಮ-2024ದಲ್ಲಿ, ಗಳಿಸಿದ ಆದಾಯದ ಒಂದು ಪಾಲನ್ನು ಸಮಾಜಮುಖಿ ಕಾರ್ಯಕ್ರಮಕ್ಕೆ ವಿನಿಯೋಗಿಸಬೇಕೆಂಬ ಡಾ. ಸುಧಾಕರ್ ಶೆಟ್ಟಿಯವರ ಆಶಯದಂತೆ, ಕಾಲೇಜಿನ ವಾಣಿಜ್ಯ ವಿಭಾಗದ ವತಿಯಿಂದ ವಾರ್ಷಿಕ ಕ್ರೀಡಾಕೂಟದ ಸಂದರ್ಭ ಆಯೋಜಿಸಿದ್ದ ವ್ಯವಹಾರದಲ್ಲಿ ಕಲಿಕೆ ಮತ್ತು ಗಳಿಕೆ ಎಂಬ ವಿನೂತನ ಕಾರ್ಯಕ್ರಮದಿಂದ ವಿದ್ಯಾರ್ಥಿಗಳಿಗೆ ಬಂದ ಲಾಭದಲ್ಲಿ 15 ಸಾವಿರ ರೂ.ವನ್ನು ಅನಾರೋಗ್ಯದಿಂದ ಬಳಲುತ್ತಿರುವ ಮಿಯ್ಯಾರು ಗ್ರಾಮದ ಮಂಗಳಪಾದೆಯ ಮಂಜುನಾಥ್ ದೇವಾಡಿಗ ಮತ್ತು ಪ್ರಮಿಳಾ ದೇವಾಡಿಗ ದಂಪತಿಯ ಪುತ್ರ 14 ವರ್ಷ ಪ್ರಾಯದ ಚರಣ್ ಅವರಿಗೆ ಹಸ್ತಾಂತರಿಸಿಲಾಯಿತು.
ಜ್ಞಾನಸುಧಾ ಪತ್ರಿಕೆ-38 ಬಿಡುಗಡೆ: ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ತ್ರೆöÊಮಾಸಿಕ ಪತ್ರಿಕೆಯಾದ ಜ್ಞಾನಸುಧಾ ಪತ್ರಿಕೆ-38ನ್ನು ಬಿಡುಗಡೆಗೊಳಿಸಲಯಿತು.ರಸಾಯನ ಶಾಸ್ತç ವಿಭಾಗದ ಮುಖ್ಯಸ್ಥ ಡಾ. ಪ್ರಜ್ವಲ್ ಕುಲಾಲ್ ವಾರ್ಷಿಕ ವರದಿ, ಭೌತಶಾಸ್ತç ಉಪನ್ಯಾಸಕ ಚಂದ್ರಕಾAತ್ ವಿದ್ಯಾರ್ಥಿಗಳ ಸಾಂಸ್ಕೃತಿಕ ಸಾಧನೆಯ ಪಟ್ಟಿ ಹಾಗೂ ದೈ.ಶಿ.ನಿರ್ದೇಶಕಿ ಸೌಜನ್ಯ ಹೆಗ್ಡೆ ಕ್ರೀಡಾಸಾಧಕರ ಪಟ್ಟಿ ವಾಚಿಸಿದರು.ಉಪಪ್ರಾಂಶುಪಾಲರಾದ ಸಾಹಿತ್ಯ ಮತ್ತು ಉಷಾ ರಾವ್ ಯು, ವಿದ್ಯಾರ್ಥಿನಾಯಕರಾದ ಮಯೂರ್ ಎಂ.ಗೌಡ ಮತ್ತು ಅನನ್ಯ ವಿ.ಶೆಟ್ಟಿ, ಟ್ರಸ್ಟಿ ನಿತ್ಯಾನಂದ ಪ್ರಭು, ಕೌನ್ಸಿಲರ್ ಡಾ. ಪ್ರಸನ್ನ ಹೆಗ್ಡೆ, ಪಿ.ಆರ್.ಒ. ಜ್ಯೋತಿ ಪದ್ಮನಾಭ ಭಂಡಿ, ಗ್ರಾ.ಪಂ. ಸದಸ್ಯರಾದ ರಹಮತ್‌ಉಲ್ಲಾ, ಹಿತೈಷಿಗಳಾದ ತ್ರಿವಿಕ್ರಮ ಕಿಣಿ, ದೇವೇಂದ್ರ ನಾಯಕ್ ಉಪಸ್ಥಿತರಿದ್ದರು.ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಮುಖ್ಯಕಾರ್ಯನಿಹಣಾಧಿಕಾರಿ ದಿನೇಶ್ ಎಂ. ಕೊಡವೂರ್ ಸ್ವಾಗತಿಸಿದರು. ಆಂಗ್ಲಭಾಷಾ ಉಪನ್ಯಾಸಕಿ ದರ್ಶಿನಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.




















