ಜೆಸಿಐ ಕಾರ್ಕಳ ರೂರಲ್ ವತಿಯಿಂದ ಕೊಡೆ ವಿತರಣಾ ಕಾರ್ಯಕ್ರಮ

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇಂದಿರಾನಗರ ಮಾಳ ಇಲ್ಲಿ
ದಿನಾಂಕ 28/06/2024 ರಂದು ಜೆಸಿಐ ಕಾರ್ಕಳ ರೂರಲ್ ಇವರು ನೀಡಿದ ಕೊಡೆ ವಿತರಣಾ ಕಾರ್ಯಕ್ರಮವು ನೆರವೇರಿತು.
ಈ ಕಾರ್ಯಕ್ರಮದಲ್ಲಿ ಜೆಸಿಐನ ಅಧ್ಯಕ್ಷರಾದ ಶ್ರೀ ಸಂತೋಷ್ ಬಂಗೇರ ಮಿಯ್ಯಾರು , ನಿಕಟ ಪೂರ್ವ ಅಧ್ಯಕ್ಷರಾದ ಮಂಜುನಾಥ ಕೋಟ್ಯಾನ್ ಸೂರಾಲು ಇವರು ವಿದ್ಯಾರ್ಥಿಗಳಿಗೆ ಕೊಡೆಯನ್ನು ವಿತರಿಸಿ ಗ್ರಾಮೀಣ ಭಾಗದ ಈ ಸಂಸ್ಥೆಗೆ ಇನ್ನಷ್ಟು ಕೊಡುಗೆಗಳು ಒದಗಿ ಬರಲಿ ಎಂದು ಶುಭ ಹಾರೈಸಿದರು. ಹಾಗೂ ಮಾಳ ಗ್ರಾಮ ಪಂಚಾಯತ್ ನಿಕಟ ಪೂರ್ವ ಅಧ್ಯಕ್ಷರಾದ ಅಜಿತ್ ಹೆಗ್ಡೆಯವರು ಜೆಸಿಐ ಸಂಸ್ಥೆಯ ಸಮಾಜ ಸೇವಾ ಕಾರ್ಯವನ್ನು ಶ್ಲಾಘಿಸಿದರು. ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯ ಪರಿವೀಕ್ಷಕರಾದ ವಸಂತ್ ಶೆಟ್ಟಿ ಇವರು ಜೆಸಿಐ ಸಂಸ್ಥೆಯ ಈ ಕೊಡುಗೆ ಮಕ್ಕಳ ಮುಗ್ಧ ಮನಸ್ಸಿಗೆ ಖುಷಿಯನ್ನು ನೀಡುತ್ತದೆ ಹಾಗೂ ಅವರ ಮುಂದಿನ ಬದುಕಿಗೆ ಇದು ಪ್ರೇರಣೆಯಾಗುತ್ತದೆ ಎಂದರು. ದಾನಿಗಳಾದ ಸಂತೋಷ್ ಪೂಜಾರಿ ಶುಭ ಗ್ರಾಫಿಕ್ಸ್ ಕಾರ್ಕಳ, ಈ ಭಾಗದ ಆರಕ್ಷಕರಾದ ಬಸವಣ್ಣ ಸರ್, ಇವರು ಉಪಸ್ಥಿತರಿದ್ದರು.ಮುಖ್ಯ ಶಿಕ್ಷಕಿ ಜಯಾ ಕೆ ಮೊಯ್ಲಿ ಎಲ್ಲರನ್ನೂ ಸ್ವಾಗತಿಸಿದರು. ವಿನಯ ನಿರೂಪಿಸಿದರು. ಹಾಗೂ ಅರುಣ ಕುಮಾರಿ ವಂದಿಸಿದರು. ಸಂಧ್ಯಾ ಹಾಗೂ ವಿದ್ಯಾಲಕ್ಷ್ಮಿ ಇವರು ಸಹಕರಿಸಿದರು.