
ಸರಕಾರಿ ಪದವಿಪೂರ್ವ ಕಾಲೇಜು, ಸಾಣೂರು ಇದರ ಸಭಾಂಗಣದಲ್ಲಿ 2024-25 ನೇ ಸಾಲಿನ ‘ಜೂನಿಯರ್ ರೆಡ್ ಕ್ರಾಸ್’ ಹಾಗೂ ಕ್ರೀಡಾ ಚಟುವಟಿಕೆಗಳ ಉದ್ಘಾಟನೆಯು ದಿನಾಂಕ 17.08.2024 ರ ಶನಿವಾರದಂದು ನಡೆಯಿತು.ವಿದ್ಯಾರ್ಥಿನಿಯರಾದ ಪಲ್ಲವಿ,ಕವನ ಹಾಗೂ ದೀಪಿಕಾ ರವರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದ ಉದ್ಘಾಟನೆಯನ್ನು ಮುರತಂಗಡಿಯ ರಿಜೆನ್ಸಿಯ ಮಾಲಕರಾದ ಶ್ರೀ ರಮೇಶ ಸಾಲ್ಯಾನ್ ರವರು ದೀಪ ಪ್ರಜ್ವಲನಗೊಳಿಸುವ ಮೂಲಕ ನೆರವೇರಿಸಿದರು ಹಾಗೂ ಕಾಲೇಜಿನ ಸ್ಪೋರ್ಟ್ಸ್ ಜೆರ್ಸಿಯನ್ನು ಅನಾವರಣಗೊಳಿಸಿದರು.
ಡಾ. ಅಲಿಸ್ಟರ್ ಅವರು ಪ್ರಥಮ ಚಿಕಿತ್ಸಾ ಕಿಟ್ ಅನಾವರಣಗೊಳಿಸಿ ,ಅದರಲ್ಲಿನ ಪರಿಕರಗಳನ್ನು ಪ್ರಥಮ ಚಿಕಿತ್ಸೆಯಲ್ಲಿ ಯಾವ ಸಂದರ್ಭದಲ್ಲಿ ಹೇಗೆ ಬಳಸಬೇಕೆಂಬುದರ ಬಗ್ಗೆ ಪ್ರಾತ್ಯಕ್ಷಿಕೆಯ ಮೂಲಕ ತಿಳಿಸಿಕೊಟ್ಟರಲ್ಲದೆ, ವಿದ್ಯಾರ್ಥಿಗಳಿಗೆ ಕ್ರೀಡಾ ಚಟುವಟಿಕೆಗಳ ಸಂದರ್ಭದಲ್ಲಿ ದೇಹಕ್ಕೆ ಆಗುವಂತಹ ಗಾಯಗಳು,ತೊಂದರೆಗಳು ಹಾಗು ಮುಂದಾಗುವ ಅಪಾಯಗಳ ಬಗ್ಗೆ ಮಾಹಿತಿ ನೀಡುತ್ತಾ ಯಾವ ರೀತಿ ಮುನ್ನೆಚ್ಚರಿಕೆ ವಹಿಸಬೇಕೆಂಬುವುದನ್ನು ತಿಳಿಸಿದರು. ಕಾಲೇಜಿನ ಜೂನಿಯರ್ ರೆಡ್ ಕ್ರಾಸ್ ನ ಸಲಹೆಗಾರರಾದ ಹಾಗೂ ಕ್ರೀಡಾ ಮಾರ್ಗದರ್ಶಕರಾದ ರಸಾಯನಶಾಸ್ತ್ರ ಉಪನ್ಯಾಸಕ ಶ್ರೀ ನರೇಶ ಆಚಾರ್ಯ, ಇವರು ಕಾರ್ಯಕ್ರಮವನ್ನು ನಿರೂಪಿಸಿದರು.ಆಂಗ್ಲಭಾಷಾ ಉಪನ್ಯಾಸಕಿ ಡಾ. ಸುಮತಿ ಪಿ. ಯವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಅರ್ಥಶಾಸ್ತ್ರ ಉಪನ್ಯಾಸಕರಾದ ಶ್ರೀ ಅರವಿಂದ ಕೆ.ಎನ್, ಇತಿಹಾಸ ಉಪನ್ಯಾಸಕಿ ಶ್ರೀಮತಿ ಸೀಮಾ ರೈ ಹಾಗೂ ಗಣಿತ ಉಪನ್ಯಾಸಕಿ ಶ್ರೀಮತಿ ಟೆಲ್ಮ ರೀಟಾ ರಸ್ಕಿನ್ಹಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.













