ಶಾಲಾ ನಾಯಕ ಹಾಗೂ ಉಪನಾಯಕರ ಚುನಾವಣೆ

ದಿನಾಂಕ 08-06-2026 ಸೋಮವಾರದಂದು, ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಬಂಗ್ಲೆಗುಡ್ಡೆ ಕೆರ್ವಾಶೆ ಇದರ, 2026-27ನೇ ಶೈಕ್ಷಣಿಕ ಸಾಲಿನ ಶಾಲಾ ನಾಯಕ ಹಾಗೂ ಉಪನಾಯಕರ ಚುನಾವಣೆಯನ್ನು ಇವಿಎಂ (EVM) ಮೂಲಕ ಯಶಸ್ವಿಯಾಗಿ ನಡೆಸಲಾಯಿತು.
ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಪ್ರಿಸೈಡಿಂಗ್ ಆಫೀಸರ್ ಹಾಗೂ ಪೋಲಿಂಗ್ ಆಫೀಸರ್ ಗಳಾಗಿ ಕರ್ತವ್ಯ ನಿರ್ವಹಿಸಿ ಚುನಾವಣಾ ಪ್ರಕ್ರಿಯೆಯನ್ನು ಅಚ್ಚುಕಟ್ಟಾಗಿ ಹಾಗೂ ಯಶಸ್ವಿಯಾಗಿ ನಡೆಸಿಕೊಟ್ಟರು. ಶಿಕ್ಷಕ ವೃಂದದ ಸಂಪೂರ್ಣ ಮಾರ್ಗದರ್ಶನದಲ್ಲಿ ಚುನಾವಣೆಯು ಮಾದರಿ ಚುನಾವಣೆಯಾಗಿ ಮೂಡಿಬಂದಿತು.ಮತದಾನ ಪ್ರಕ್ರಿಯೆಯ ನಂತರ ನಡೆದ ಮತ ಎಣಿಕೆಯಲ್ಲಿ 5 ನೇ ತರಗತಿಯ ಸೃಶಾನ್ ಎಸ್. ಪೂಜಾರಿ ಅವರು ಅತಿ ಹೆಚ್ಚು ಮತಗಳನ್ನು ಪಡೆದು ಶಾಲಾ ನಾಯಕರಾಗಿ ಆಯ್ಕೆಯಾದರು. ಹಾಗೆಯೇ 4 ನೇ ತರಗತಿಯ ಸಹನ್ ವಿ. ನಾಯಕ್ ಅವರು ಶಾಲಾ ಉಪನಾಯಕರಾಗಿ ಆಯ್ಕೆಯಾದರು.
ಈ ಚುನಾವಣೆಯ ಮೂಲಕ ವಿದ್ಯಾರ್ಥಿಗಳು ಪ್ರಜಾಪ್ರಭುತ್ವ ವ್ಯವಸ್ಥೆ, ಮತದಾನದ ಮಹತ್ವ ಹಾಗೂ ಚುನಾವಣೆ ಹೇಗೆ ನಡೆಯುತ್ತದೆ ಎಂಬುದರ ಕುರಿತು ಸ್ಪಷ್ಟವಾದ ಅರಿವು ಪಡೆದುಕೊಂಡರು. ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ, ಜವಾಬ್ದಾರಿ ಹಾಗೂ ನಾಗರಿಕ ಪ್ರಜ್ಞೆಯನ್ನು ಬೆಳೆಸುವಲ್ಲಿ ಈ ಕಾರ್ಯಕ್ರಮ ಮಹತ್ವದ ಪಾತ್ರ ವಹಿಸಿತು.
ಕೊನೆಯಲ್ಲಿ ಮುಖ್ಯೋಪಾಧ್ಯಾಯರು ಆಯ್ಕೆಯಾದ ಶಾಲಾ ನಾಯಕ ಹಾಗೂ ಉಪನಾಯಕರನ್ನು ಅಧಿಕೃತವಾಗಿ ಘೋಷಿಸಿ ಅಭಿನಂದಿಸಿದರು.





















































































