
ಬೆಂಗಳೂರು: ದೇಹ ಬಲಿಷ್ಠ ಆಗಬೇಕು ಅಂತ ಪ್ರೋಟೀನ್ ಪೌಡರ್ ಬಳಸುವವರ ಸಂಖ್ಯೆ ಹೆಚ್ಚಳವಾಗಿದ್ದು ಅದರಲ್ಲೂ ಜಿಮ್, ಸ್ಪೋರ್ಟ್ಗಳಲ್ಲಿ ತೊಡಗಿಕೊಂಡಿರುವ ಯುವಕ ಯುವತಿಯರಂತೂ ಪ್ರೋಟೀನ್ ಹೆಸರಿನಲ್ಲಿ ಸ್ಲೋ ಪಾಯಿಸನ್ ಸೇವನೆ ಮಾಡಿ ಜೀವಕ್ಕೆ ಅಪಾಯ ತಂದುಕೊಳ್ಳುತ್ತಿದ್ದಾರೆ ಎಂದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಹೇಳಿದೆ.
ICMR 13 ವರ್ಷದ ಬಳಿಕ ಭಾರತೀಯರ ಫುಡ್ ಡಯಟ್ರಿ ಗೈಡ್ ಲೈನ್ಸ್ ಬಿಡುಗಡೆ ಮಾಡಿದ್ದು, ಪ್ರೋಟಿನ್ ಪೌಡರ್ ಬಳಕೆದಾರಿಗೆ ಅಚ್ಚರಿ ಮೂಡಿಸುವ ಅಂಶಗಳನ್ನು ನೀಡಿದೆ. ಅತಿಯಾದರೆ ಅಮೃತವೂ ವಿಷ ಎಂಬಂತೆ ಅತಿಯಾದ ಪ್ರೋಟಿನ್ ಪೌಡರ್ ಸೇವನೆಯಿಂದ ಜೀವಕ್ಕೆ ಅಪಾಯವಿರುವ ಬಗ್ಗೆ ವರದಿಯಲ್ಲಿ ಉಲ್ಲೇಖಿಸಿದೆ. ಭಾರತದಲ್ಲಿ ಅತಿ ಹೆಚ್ಚು ಚೀಪ್ ಪ್ರೋಟಿನ್ ಪೌಡರ್‌ಗಳು ಮಾರಟವಾಗುತ್ತಿದ್ದು ಅದರಲ್ಲಿ ಸಕ್ಕರೆ, ಸೋಡಿಯಂ, ಪೋಟ್ಯಾಷಿಯಂ ಸೇರಿದಂತೆ ಹಲವು ಕೆಮಿಕಲ್ ಅಂಶಗಳು ಹೆಚ್ಚಾಗಿ ಪತ್ತೆಯಾಗಿದ್ದು, ಆರೋಗ್ಯದ ದುಷ್ಪರಿಣಾಮ ಬೀರುತ್ತಿದೆ.
ಭಾರತದಲ್ಲಿ ನೆಲೆಯೂರಿರುವ ಅನೇಕ ಚೀಪ್ ಬ್ರಾಂಡ್ ಪ್ರೋಟಿನ್ ಪೌಡರ್ಗಳಲ್ಲಿ ಜೀವಕ್ಕೆ ಕುತ್ತು ತರುವಂತಹ ಅನೇಕ ಕೆಮಿಕಲ್ ಬಳಕೆ ಮಾಡಲಾಗುತ್ತಿದೆ. ಹೆಚ್ಚಾಗಿ ಸಕ್ಕರೆ ಅಂಶಗಳು ಪ್ರೋಟಿನ್ ಪೌಡರ್ಗಳಲ್ಲಿ ಬಳಕೆ ಮಾಡಲಾಗುತ್ತಿದ್ದು ಇದರಿಂದ ಡಯಾಬಿಟಿಸ್ ನಂತಹ ಸಮಸ್ಯೆಗಳು ಬರುವ ಸಾಧ್ಯತೆ ಇದೆ. ದೇಹಕ್ಕೆ ಕ್ಯಾಲೋರಿ ಒದಗಿಸುವ ಹಿನ್ನಲೆ ಅದರಲ್ಲಿ ಬಳಸುವ ಒಂದಿಷ್ಟು ಕೆಮಿಕಲ್ ಅಂಶಗಳು ಕಿಡ್ನಿ, ಲಿವರ್ ಮೇಲೆ ಸೈಡ್ ಎಫೆಕ್ಟ್ ಬೀರುವ ಸಾಧ್ಯತೆಗಳಿದ್ದು, ಅತಿಯಾಗಿ ಪ್ರೋಟಿನ್ ಪೌಡರ್ಗಳನ್ನು ಬಳಸದೆ ದೇಹ ವೃದ್ಧಿಗೆ ನ್ಯಾಚುರಲ್ ಆಹಾರ ಬಳಸುವಂತೆ ಹಿರಿಯ ಮದುಮೇಹ ತಜ್ಞ ಡಾ.ಅನೀಲ್‌ಕುಮಾರ್ ಸಲಹೆ ನೀಡಿದ್ದಾರೆ.
ದೇಹ ಬಲಾಢ್ಯತೆಗಾಗಿ ಕಳಪೆಮಟ್ಟದ ಪ್ರೋಟೀನ್ಗಳನ್ನು ತೆಗೆದುಕೊಳ್ಳುವ ಮುನ್ನ ಯುವಜನತೆ ಎಚ್ಚೆತ್ತುಕೊಂಡು ಆರೋಗ್ಯದ ಮೇಲೆ ಕಾಳಜಿ ವಹಿಸಬೇಕಾಗಿದೆ.