
ಬೆಂಗಳೂರು: ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಇಂದು ಸುದ್ದಿಗಾರರೊಂದಿಗೆ ಮಾತನಾಡಿ ಸಂವಿಧಾನ ಬದಲಿಸಬೇಕೆಂದು ಸಂದರ್ಶನದಲ್ಲಿ ಹೇಳಲು ತನಗೇನೂ ತಲೆಕೆಟ್ಟಿಲ್ಲ, ತಾನು ಹೇಳಿದ್ದೇನೆಂದು ಹೇಳುತ್ತಿರುವವರಿಗೆ ತಲೆ ಕೆಟ್ಟಿರಬೇಕು, ಹಾಗೇನಾದರೂ ಹೇಳಿದ್ದರೆ ರಾಜಕೀಯದಿಂದ ನಿವೃತ್ತನಾಗ್ತೀನಿ, ತನ್ನ ಸವಾಲು ಎದುರಿಸಲು ಬಿಜೆಪಿ ನಾಯಕರು ಸಿದ್ಧರಿದ್ದಾರಾ ಎಂದು ಖಾರವಾಗಿ ಪ್ರಶ್ನೆ ಮಾಡಿದ್ದಾರೆ.
ತಾನು ಸಂದರ್ಶನದಲ್ಲಿ ಹೇಳಿದ್ದು ಸತ್ಯ ಮಾತ್ರ, ಅದನ್ನು ಜೀರ್ಣಿಸಿಕೊಳ್ಳಲಾಗದೆ ಬಿಜೆಪಿಯವರು ಇಲ್ಲಸಲ್ಲದ ಮಾತುಗಳನ್ನಾಡುತ್ತಿದ್ದಾರೆ ಎಂದು ಶಿವಕುಮಾರ್ ಬೇಸರ ವ್ಯಕ್ತಪಡಿಸಿದರು.