ನೂತನ ಹಾಸ್ಯಮಯ ನಾಟಕ ಏರಾದುಪ್ಪು( ತೂದು ಪನ್ಲೆ ) ಇದರ ಶುಭ ಮುಹೂರ್ತ

ಸಂತೋಷ್ ಕಲಾವಿದೆರ್ ಪಾವಳ ವರ್ಕಾಡಿ ತಂಡದ ಈ ವರ್ಷದ ನೂತನ ಕಲಾಕಾಣಿಕೆ ವಿಭಿನ್ನ ಶೈಲಿಯ ಕುತೂಹಲಭರಿತ ಹಾಸ್ಯಮಯ ನಾಟಕ ಏರಾದಿಪ್ಪು ಇದರ ಶುಭಮುಹೂರ್ತ ನಾಳೆ ಬೆಳಿಗ್ಗೆ 8ಗಂಟೆಗೆ ಶ್ರೀ ಕ್ಷೇತ್ರ ಒಡಿಯೂರಿನಲ್ಲಿ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಗಳ ಆಶೀರ್ವಾದದೊಂದಿಗೆ ನೆರವೇರಲಿದೆ.
ಏರೆನ್ ನಂಬೊಡು,ಅಂಚಾಯಿನೆಟ್ ಇಂಚಾಂಡ್ ಎನ್ನುವ ಜನಮೆಚ್ಚುಗೆ ಪಡೆದ ನಾಟಕವನ್ನು ನೀಡಿದ ಈ ತಂಡದ ಈ ವರ್ಷದ ಹೊಸ ನಾಟಕ ಏರಾದಿಪ್ಪು ಆಗಿದ್ದು ಈ ನಾಟಕದ ರಚನೆಯನ್ನು ಚೇತನ್ ವರ್ಕಾಡಿ ಮಾಡಿದ್ದು ನಿತಿನ್ ಹೊಸಂಗಡಿ ನಿರ್ದೇಶನ ಮಾಡಲಿದ್ದಾರೆ.ರೂಪಶ್ರೀ ವರ್ಕಾಡಿ ಇವರು ಸಲಹೆ ಸಹಕಾರ ನೀಡಿದ್ದು ವಿಜಯ ಕುಮಾರ್ ಕೊಂದಲಕುಮೇರು ತಂಡದ ಸಾರಥ್ಯ ವಹಿಸಿದ್ದಾರೆ.
