
ಕಾರ್ಕಳ : ಗುರುಪೂಜೆಯ ಪಠಣವು ನಮ್ಮ ಮನಸನ್ನು ಸುಂದರವಾದ ಪ್ರಾಚೀನ ಜ್ಞಾನ ಹಾಗೂ ಮಹಾನ್ ಗುರುಗಳ ಉಪಸ್ಥಿತಿಯ ಆಳವಾದ ಭಾವನೆಯೊಂದಿಗೆ ಒಂದುಗೂಡಿಸುತ್ತದೆ.ಗುರು ಪೂಜೆಯು ನಮ್ಮೆಲ್ಲಾ ಗುರುಗಳಿಗೆ ಸಲ್ಲಿಸುವ ಭಕ್ತಿಪೂರ್ವಕ ನಮನವಾಗಿದೆ.ಅಂತಹ ಮಹಾಗುರುಗಳಾದ ಪರಮಪೂಜ್ಯ ಶ್ರೀ ಶ್ರೀ ರವಿಶಂಕರ್ ಗುರೂಜಿಯವರ ಗುರುಪೂಜೆಯನ್ನು ಪ್ರತೀ ವಾರದ ಗುರುವಾರದಂದು ಶಾಲಾ ಕೋಶಾಧಿಕಾರಿಗಳು ಹಾಗೂ ‘ಆರ್ಟ್ ಆಫ್ ಲಿವಿಂಗ್’ ನ ಸಕ್ರೀಯ ಸದಸ್ಯರೂ ಆಗಿರುವ ಶ್ರೀಯುತ ದಿನೇಶ್ ಕಾಮತ್ ಇವರು ನಡೆಸಿಕೊಟ್ಟರು.
ಮಕ್ಕಳಿಂದ ಹರಿ ಓಂ ಧ್ಯಾನದ ಜೊತೆಗೆ ಭಜನೆಯು ನಡೆಯಿತು.ಕಾರ್ಯಕ್ರಮದಲ್ಲಿ ಶಾಲಾ ಪ್ರಾಂಶುಪಾಲರಾದ ಶ್ರೀಮತಿ ಸೋನಾಲ್ ಆರ್. ಕಾಮತ್, ಶಿಕ್ಷಕರು,ವಿದ್ಯಾರ್ಥಿಗಳು ಉಪಸ್ಥಿತರಿದ್ದರು.



















