ಭಕ್ತಿಗಾಯನ,ಕುಣಿತ ಭಜನಾ,ಸಾಧನ ಸನ್ಮಾನ,ಸೇವಾ ಪುರಸ್ಕಾರ ಮತ್ತು ವಾರ್ಷಿಕೋತ್ಸವ

ಕಾರ್ಕಳ:ತಾಲೂಕಿನ ರೆಂಜಾಳ ಗ್ರಾಮದ ಶ್ರೀ ಮಹಮ್ಮಾಯಿ ಕುಣಿತ ಭಜನಾ ಮಂಡಳಿಯು ವರ್ಷಾಚರಣೆಯನ್ನು ಆಚರಿಸುತ್ತಿದ್ದು,ಇದರ ಅಂಗವಾಗಿ ನ.24 ರ ರವಿವಾರ ಸಂಜೆ 4.30 ಕ್ಕೆ ಕಾರ್ಯಕ್ರಮಗಳು ನಡೆಯಲಿವೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಮಹಾಮ್ಮಾಯಿ ದೇವಸ್ಥಾನ ರೆಂಜಾಳದ ಆಡಳಿತದಾರರಾದ ಶ್ರೀ ಬಿ ಮಹಾವೀರ ಹೆಗ್ಡೆ ಬ್ರಾಣಬೆಟ್ಟು ವಹಿಸಲಿದ್ದಾರೆ,ಉದ್ಘಾಟನೆಯನ್ನು ಅರ್ಚಕರಾದ ಸುಬ್ರಹ್ಮಣ್ಯ ಉಪಧ್ಯಾಯ ನೆರವೇರಿಸಲಿದ್ದು,ಸುಪ್ರಿಯ ಶೆಟ್ಟಿ,ದೀಪಿಕಾ ಶೆಟ್ಟಿ ಹಾಗೂ ಸ್ವಾತಿ ಶೆಟ್ಟಿ,ವಿದ್ಯಾ ಹೆಗ್ಡೆ ಕಾರ್ಯಕ್ರಮದಲ್ಲಿ ಉಪಸ್ಥಿತಿ ಇರಲಿದ್ದಾರೆ.
ಕಾರ್ಯಕ್ರಮದಲ್ಲಿ ಕ್ರೀಡೆಯಲ್ಲಿ ಸಾಧನೆಗೈದ ರಕ್ಷಾ,ದೀಕ್ಷಾ ಹಾಗೂ ಸಾನ್ವಿ ಶೆಟ್ಟಿ ಸನ್ಮಾನ ಪಡೆಯಲಿದ್ದು,ವಿಶ್ವನಾಥ ಶೆಟ್ಟಿ,ಸಿರಿಯಣ್ಣ ಶೆಟ್ಟಿ,ಹಾಗೂ ಮಹೇಶ ಪೂಜಾರಿ ಮತ್ತು ಮುಕೇಶ ಪೂಜಾರಿ,ಉದಯಶೆಟ್ಟಿ ಸೇವಾ ಪುರಸ್ಕಾರ ಪಡೆಯಲಿದ್ದಾರೆ.ಸಭಾ ಕಾರ್ಯಕ್ರಮ ರಾತ್ರಿ 8.00 ಗಂಟೆಗೆ ನಡೆಯಲಿದೆ ಎಂದು ಕಾರ್ಯಕ್ರಮದ ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




















