“ಮಾನವೀಯತೆ ಸರ್ವ ಶ್ರೇಷ್ಠವಾದದ್ದು ವಿದ್ಯಾರ್ಥಿ ಜೀವನದಿಂದಲೇ ಈ ಸದ್ಗುಣವನ್ನು ಮೇಳಯಿಸಿಕೊಂಡರೆ ಜೀವನ ಸಫಲಗೊಳ್ಳುವುದರಲ್ಲಿ ಸಂಶಯವಿಲ್ಲ”-ಕಮಲಾಕ್ಷ ಕಾಮತ್

ಶ್ರೀ ಭುವನೆಂದ್ರ ಪದವಿ ಪೂರ್ವ ಕಾಲೇಜಿನ ಪ್ರಾರಂಭೋತ್ಸವ ಶಿಕ್ಷಣ, ಆರೋಗ್ಯ ಮತ್ತು ಬ್ಯಾಂಕಿಂಗ್ ಕ್ಷೇತ್ರಗಳಲ್ಲಿ ಪವಾಡವನ್ನು ಸೃಷ್ಟಿಸಿದ ಮಣಿಪಾಲದ ಬ್ರಹ್ಮ ಡಾ| ಟಿ. ಎಂ. ಎ ಪೈ ಅವರ ಕನಸು ಮತ್ತು ದೂರದರ್ಶಿತ್ವದ ಫಲಸ್ವರೂಪವಾಗಿ 1960 ರಲ್ಲಿ ಹುಟ್ಟಿದ ಸಂಸ್ಥೆ ಶ್ರೀ ಭುವನೇಂದ್ರ ಕಾಲೇಜು.
ಜೂನ್ ತಿಂಗಳ 6 ಮತ್ತು 7ನೇ ತಾರೀಕಿನಂದು ಶ್ರೀ ಭುವನೇಂದ್ರ ಪದವಿ ಪೂರ್ವ ಕಾಲೇಜಿನ ವಿಜ್ಞಾನ, ವಾಣಿಜ್ಯ ಮತ್ತು ಕಲಾವಿಭಾಗದ ಪ್ರಾರಂಭೋತ್ಸವವನ್ನು ಶ್ರೀ ಭುವನೇಂದ್ರ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಸಿ.ಎ ಶಿವಾನಂದ ಪೈ ಹಾಗೂ ಶ್ರೀ ಸಿ.ಎ ಕಮಲಾಕ್ಷ ಕಾಮತ್ ಇವರು ಉದ್ಘಾಟಿಸಿದರು. ನೈತಿಕ ಮೌಲ್ಯವನ್ನು ಆಧಾರವಾಗಿಟ್ಟುಕೊಂಡು ನಮ್ಮ ಸಂಸ್ಥೆಯಲ್ಲಿ ಶಿಕ್ಷಣ ನೀಡಲಾಗುತ್ತಿದೆ ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಂಡು ವಿದ್ಯಾರ್ಥಿ ಜೀವನವನ್ನು ಸಫಲಗೊಳಿಸಿಕೊಳ್ಳಬೇಕು ಎಂದು ಕಾರ್ಯಕ್ರಮದ ಉದ್ಘಾಟನೆಯ ನೆಲೆಯಲ್ಲಿ ಶ್ರೀ ಸಿ.ಎ ಶಿವಾನಂದ ಪೈ ಅವರು ಹೇಳಿದರು.
ಮಾನವೀಯತೆ ಸರ್ವ ಶ್ರೇಷ್ಠವಾದದ್ದು ವಿದ್ಯಾರ್ಥಿ ಜೀವನದಿಂದಲೇ ಈ ಸದ್ಗುಣವನ್ನು ಮೇಳಯಿಸಿಕೊಂಡರೆ ಜೀವನ ಸಫಲಗೊಳ್ಳುವುದರಲ್ಲಿ ಸಂಶಯವಿಲ್ಲ ಎಂದು ಕಾರ್ಕಳದ ದಾನಿ ನಿವೃತ್ತ ಲೆಕ್ಕ ಪರಿಶೋಧಕರಾದ ಶ್ರೀ ಸಿ.ಎ ಕಮಲಾಕ್ಷ ಕಾಮತ್ ಇವರು ಅಭಿಪ್ರಾಯಪಟ್ಟರು. ಕಾಲೇಜಿನ ನೀತಿ ನಿಯಮ ಮತ್ತು ಕಾಲೇಜು ಬೆಳೆದು ಬಂದ ದಾರಿ ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಕರ್ತವ್ಯ ಹಾಗೂ ನಿಷ್ಠೆಯ ಬಗ್ಗೆ ಸಮಾರಂಭದ ಅತಿಥಿಯಾದ ಡಾ. ಮಂಜುನಾಥ್ ಎ ಕೋಟ್ಯಾನ್ ಇವರು ಹೇಳಿದರು. ಇನ್ನೋರ್ವ ಅತಿಥಿ ಎಕ್ಸ್ಟ್ರಾ ಮಾರ್ಕ್ಸ್ ನ ಚೀಫ್ ಅಕಾಡೆಮಿಕ್ ಆಫೀಸರ್ ಶ್ರೀ ವೆಂಕಟಫಣಿಕಿರಣ್ ಇವರು ಎಕ್ಸ್ಟ್ರಾ ಮಾರ್ಕ್ಸ್ ಸಂಸ್ಥೆಯ ವತಿಯಿಂದ ನಡೆಸಲ್ಪಡುವ ನೀಟ್, ಜೆ.ಇ.ಇ ,ಮತ್ತು ಸಿ.ಇ.ಟಿತರಗತಿಗಳ ಗುಣಾತ್ಮಕ ನಿರ್ವಹಣೆಯ ಬಗ್ಗೆ ವ್ಯಾಖ್ಯಾನಿಸಿದರು