
ಭಾರತ್ ಸ್ಕೌಟ್ ಎಂಡ್ ಗೈಡ್ಸ್ ಸ್ಥಳೀಯ ಸಂಸ್ಥೆ ಕಾರ್ಕಳ, ಇಲ್ಲಿಯ ಶ್ರೀ ಭುವನೇಂದ್ರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ದಿನಾಂಕ 13-06-2024 ರಂದು ನೀರನ್ನು ಧ್ಯೇಯವಾಗಿಟ್ಟುಕೊಂಡು ಜಲಸಂರಕ್ಷಣ ದಿನವನ್ನು ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಶಾಲಾ ಮುಖ್ಯ ಶಿಕ್ಷಕಿ ಹಾಗೂ ಜಿಲ್ಲಾ ಸಹಾಯಕ ಗೈಡ್ ಆಯುಕ್ತರು ಆದಂತಹ ಶ್ರೀಮತಿ ವಿದ್ಯಾ ವಿ ಕಿಣಿಯವರು ಮಕ್ಕಳಿಗೆ ನೀರಿನ ಮಹತ್ವವನ್ನು ತಿಳಿಸಿದರು . ಗೈಡರ್ ಸೀಮಾ ಕಾಮತ್ ಹಾಗೂ ಸ್ಕೌಟರ್ ಸುಜಾತ ಹೆಗ್ಡೆ ಅವರು ಮಕ್ಕಳಿಗೆ ಮಾರ್ಗದರ್ಶನವಿತ್ತರು. ಈ ಕಾರ್ಯಕ್ರಮದಲ್ಲಿ ಮಕ್ಕಳು ನೀರನ್ನು ಉಳಿಸುವ ಧ್ಯೇಯವನ್ನು ಹೊತ್ತ ಚಿತ್ರವನ್ನು ಬಿಡಿಸಿದರು. ಗೈಡರ್ ರಚಿಸಿದ ನೀರಿಗೆ ಸಂಭಂದಿಸಿದ ಹಾಡನ್ನು ಹಾಡಿದರು.