
ದಿನಾಂಕ 29-05-2024 ರಂದು ಲಯನ್ಸ್ ಪ್ರಾಂತೀಯ ಅಧ್ಯಕ್ಷರಾದ ಲ.ಹೃಷಿಕೇಶ್ ಹೆಗ್ಡೆ ದಂಪತಿಗಳು ಮತ್ತು ಮಕ್ಕಳು ಹಾಗೂ ಅವರ ಮಾತ್ರಶೀ ಯಾವರು ಶ್ರೀ ದುರ್ಗಾ ಕಿರಿಯ ಪ್ರಾಥಮಿಕ ಶಾಲೆ, ಕುಕ್ಕುಂದೂರು ಇಲ್ಲಿ ಬೇಟಿ ನೀಡಿ ಶಾಲಾ ಮಕ್ಕಳ ಬ್ಯಾಗ್ ಹಾಗೂ ಕೊಡೆ ಹಾಗೂ ಇನ್ನಿತರ ಅಗತ್ಯ ಸಲಕರಣೆಗಾಗಿ ರೂ. 48000/- ಯನ್ನು ಕೊಡುಗೆ ನೀಡಿರುತ್ತಾರೆ. ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಅದ್ಯಕ್ಷರು ಹಾಗೂ ಶಾಲೆಯ ಹಳೆ ವಿದ್ಯಾರ್ಥಿ ಸಚಿಂದ್ರಶೆಟ್ಟಿ , ಕಾರ್ಯದರ್ಶಿ ಪ್ರವೀಣ್ ಕುಮಾರ್ ಕೋಶಾಧಿಕಾರಿ ಕಿಶೋರ್ ಕುಮಾರ್, ಲಯನ್ಸ್ ಕ್ಲಬ್ ನ ಸದಸ್ಯರು ಹಾಗೂ ಶಾಲೆಯ ಹಳೆ ವಿದ್ಯಾರ್ಥಿಗಳಾದ ಫೆಲಿಕ್ಸ್ ಮಥಾಯ್ಸ್ , ಅರುಣ್ ಕುಮಾರ್ ಶೆಟ್ಟಿ, ಎಡ್ವರ್ಡ್, ಲಿಯೋ ಅಧ್ಯಕ್ಷರಾದ ನಿಕಿತಾ ಹಾಜರಿದ್ದರು ಶಾಲೆಯ ವತಿಯಿಂದ ಮುಖ್ಯೋಪಾಧ್ಯಾಯರಾದ ಶ್ರೀಯುತ ಜಗದೀಶ್ ಹೆಗ್ಡೆಯವರು ಧನ್ಯವಾದ ಸಲ್ಲಿಸಿದರು .