
ಇತ್ತೀಚಿಗೆ ನಿವೃತ್ತರಾದ ಎಸ್. ವಿ. ಟಿ ಅನುದಾನಿತ ಶಾಲೆಯ ಮುಖ್ಯ ಶಿಕ್ಷಕರಾದ ಜಾನಕಿನಾಥರವರು ಶ್ರೀ ದುರ್ಗಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಕುಕ್ಕುಂದೂರಿಗೆ ಭೇಟಿ ನೀಡಿದ ಸಂದರ್ಭ ಮುಖ್ಯ ಶಿಕ್ಷಕರಾದ ಜಗದೀಶ್ ಹೆಗ್ಡೆ ಹಾಗೂ ಇಲ್ಲಿನ ಶಿಕ್ಷಕ ವರ್ಗದವರು ಸೇರಿ, ವೃತ್ತಿ ಜೀವನದಲ್ಲಿ ಅವರ ಉತ್ತಮ ಸಾಧನೆಯನ್ನು ಸ್ಮರಿಸಿ,ತಮ್ಮ ಆರಂಭಿಕ ವೃತ್ತಿ ಜೀವನವನ್ನು ಭುಜಬಲಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾರಂಭಿಸಿ ಅಲ್ಲಿಂದಲೂ ಶಿಕ್ಷಕರಾಗಿ ಪ್ರಾಮಾಣಿಕ ಸೇವೆಯನ್ನು ಸಲ್ಲಿಸಿದ್ದರು.ಅವರನ್ನು ಶಾಲಾ ವತಿಯಿಂದ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಶಾಲಾ ಸಂಚಾಲಕರಾದ ರಾಧಾಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಜಾನಕಿ ನಾಥ ರವರು ಶಾಲೆಗೆ ಕಿರು ಕಾಣಿಕೆಯನ್ನು ನೀಡಿದರು.


