
ಶ್ರೀ ದುರ್ಗಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಕುಕ್ಕುಂದೂರು ಇಲ್ಲಿನ 2024 -2025 ನೇ ಸಾಲಿನ ಶಾಲಾ ಪ್ರಾರಂಭೋತ್ಸವದಲ್ಲಿ ಕಾರ್ಕಳ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಯುತ ಬಿ.ಎ ಲೋಕೇಶ್ ರವರ ಅಧ್ಯಕ್ಷತೆಯಲ್ಲಿ ಇಂದು ನೆರವೇರಿತ್ತು. ಅತಿಥಿಗಳಾಗಿ ಜಿಲ್ಲಾ ಸ್ಕೌಟ್ & ಗೈಡ್ಸ್ ಆಯುಕ್ತರಾದ ಶ್ರೀಮತಿ ಜ್ಯೋತಿ ಜೆ. ಪೈ ,ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ವೃಷಭ ರಾಜ ಕಡಂಬ, ಲಯನ್ಸ್ ಕ್ಲಬ್ ಅಧ್ಯಕ್ಷರಾದ ಸಚ್ಚೀಂದ್ರ ಶೆಟ್ಟಿ, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಅರುಣ್ ನಾಯಕ್ ನಿವೃತ್ತ ಮುಖ್ಯ ಶಿಕ್ಷಕರಾದ ಬಾಲಕೃಷ್ಣ ಶೆಟ್ಟಿ, ದಾನಿಗಳಾದ ಶ್ರೀಮತಿ ವಿಜಯ ಶೆಟ್ಟಿ, ಇಲಾಖೆಯ ಪ್ರಥಮ ದರ್ಜೆ ಸಹಾಯಕರಾದ ಗಣರಾಜ್ ಮುಳ್ಕೊಡು ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇವರೆಲ್ಲರನ್ನೂ ನಮ್ಮ ಶಾಲಾ ಮುಖ್ಯ ಶಿಕ್ಷಕರಾದ ಜಗದೀಶ್ ಹೆಗ್ಡೆಯವರು ಸ್ವಾಗತಿಸಿದರು.
ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಸರಕಾರದ ವತಿಯಿಂದ ನೀಡಲಾದ ಪಠ್ಯಪುಸ್ತಕ, ಶ್ರೀಯುತ ನಂದಕುಮಾರ್ ಶೆಟ್ಟಿ, ಮುಂಬೈ ಹಾಗೂ ಶ್ರೀಮತಿ ವಿಜಯ ರವರು ನೀಡಿದ ಬರವಣಿಗೆ ಪುಸ್ತಕ ಹಾಗೂ ಲಯನ್ಸ್ ಕ್ಲಬ್ ವತಿಯಿಂದ ನೀಡಲಾದ ಕೊಡೆ ಹಾಗೂ ಬ್ಯಾಗ್ ಅನ್ನು ಮಕ್ಕಳಿಗೆ ವಿತರಿಸಲಾಯಿತು.
ಸಮಾರಂಭಕ್ಕೆ ಶಾಲಾ ವಿದ್ಯಾರ್ಥಿಗಳಿಗೆ ಬಲೂನ್ ನೀಡಿ ಬ್ಯಾಂಡ್ ಸೆಟ್ ನೊಂದಿಗೆ ಎಲ್ಲಾ ಗಣ್ಯರ ಉಪಸ್ಥಿತಿಯಲ್ಲಿ ಶಾಲೆಗೆ ಬರಮಾಡಿ ಕೊಳ್ಳಲಾಗಿತ್ತು. ಎಲ್ಲಾ ಶಿಕ್ಷಕರು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಪೋಷಕರು ಹಾಗೂ ಹಳೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಸಿಹಿ ಊಟದ ವ್ಯವಸ್ಥೆಯನ್ನು ಡಾ!ಆಶಾ.ಪಿ. ಹೆಗ್ಡೆ ಯವರ ಸಹೋದರಿ ಶ್ರೀಮತಿ ವೀಣಾ ಭಟ್, ಬೆಂಗಳೂರು ಇವರು ನೀಡಿದ್ದರು.
ಸಹ ಶಿಕ್ಷಕರಾದ ಉಮೇಶ್ ರವರು ಕಾರ್ಯಕ್ರಮ ನಿರೂಪಣೆಗೈದು ಸಹ ಶಿಕ್ಷಕಿ ವೀಣಾ ರವರು ಧನ್ಯವಾದ ನೀಡಿದರು.




