
ಬೆಂಗಳೂರು: ಕೆಎಂಎಫ್ ಈಗಾಗಲೇ “ನಂದಿನಿ ಬ್ರ್ಯಾಂಡ್” ನಡಿ ನಂದಿನಿ ಹಾಲು, ತುಪ್ಪ, ಬೆಣ್ಣೆ, ಮೊಸರು, ಚೀಸ್, ಮಜ್ಜಿಗೆ, ಬ್ರೆಡ್, ಬನ್ ಜತೆಗೆ ಸಿಹಿ ತಿನಿಸುಗಳು, ಕುರುಕಲು ತಿಂಡಿಗಳು, ಬೇಕರಿ ಉತ್ಪನ್ನಗಳು, ಐಸ್‌ಕ್ರೀಂನಂತಹ ಹಲವು ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು ಇದೀಗ ಶೀಘ್ರದಲ್ಲೇ ನಂದಿನಿ ದೋಸೆ ಹಿಟ್ಟು ಬಿಡುಗಡೆ ಮಾಡಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಪ್ರೋಟಿನ್ ಅಂಶಗಳನ್ನು ಒಳಗೊಂಡಂತಹ ನಂದಿನಿ ದೋಸೆ ಹಿಟ್ಟಿನ ಪ್ರಯೋಗ ನಡೆದಿದ್ದು, ಕೆಲವೇ ದಿನಗಳಲ್ಲಿ ಗ್ರಾಹಕರ ಕೈ ಸೇರಲಿದೆ.
ನಂದಿನಿ ಬ್ರ್ಯಾಂಡ್‌ನಲ್ಲಿ ಹಾಲಿನ ಉಪ ಉತ್ಪನ್ನ “ವೇ ಪೌಡರ್’ ಸೇರಿದಂತೆ ಮತ್ತಿತತರ ಪದಾರ್ಥಗಳನ್ನು ಈ ದೋಸೆ ಹಿಟ್ಟಿನಲ್ಲಿ ಬಳಕೆ ಮಾಡಲಾಗುತ್ತಿದ್ದು ಈಗಾಗಲೇ ಟೆಂಡರ್ ಕೂಡ ಪೂರ್ಣಗೊಂಡಿದೆ.