
ಶಿವಮೊಗ್ಗ; ಜಿಲ್ಲೆಯ ಹೊಸನಗರ ತಾಲೂಕಿನ ಯಡೂರು ಸಮೀಪದ ಅಬ್ಬಿ ಜಲಪಾತಕ್ಕೆ ,ಬೆಂಗಳೂರಿನಿಂದ 12 ಜನ ಯುವಕರ ತಂಡ ವೀಕ್ಷಣೆಗೆ ಬಂದಿದ್ದು ಸೆಲ್ಫಿ ತೆಗೆಯುವ ಸಂದರ್ಭದಲ್ಲಿ ಯುವಕನೊಬ್ಬ ನೀರು ಪಾಲಾದ ಘಟನೆ ವರದಿಯಾಗಿದೆ.
ಬೆಂಗಳೂರಿನ ವಿನೋದ್ (26) ತನ್ನ ತಂಡದೊಂದಿಗೆ ಜಲಪಾತ ವೀಕ್ಷಣೆಗೆ ಬಂದಿದ್ದು, ಭಾರಿ ಮಳೆಯ ಹಿನ್ನೆಲೆ ಯಾರೂ ಜಲಪಾತಕ್ಕೆ ಹೋಗದಂತೆ ಕಂದಕ ಹೊಡೆಯಲಾಗಿದ್ದರೂ, ತಂಡ ಅದನ್ನು ಲೆಕ್ಕಿಸದೆ ನೀರಿಗೆ ಇಳಿದಿದ್ದು, ಕಾಲು ಜಾರಿದ ಹಿನ್ನೆಲೆ ಇದೀಗ ವಿನೋದ್ ನೀರು ಪಾಲಾಗಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಪೊಲೀಸರು ಭೇಟಿ ನೀಡಿದ್ದು ಮೃತ ದೇಹಕ್ಕಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.