30.8 C
Udupi
Saturday, April 25, 2026
spot_img
spot_img
HomeBlogಶಿರ್ಲಾಲು:ಸರಕಾರಿ ಪದವಿ ಪೂರ್ವ ಕಾಲೇಜು ಮತ್ತು ಪ್ರೌಢಶಾಲಾ ವಿಭಾಗ ವತಿಯಿಂದ ಸ್ವರ್ಣ ಪದಕ ಪ್ರಧಾನ...

ಶಿರ್ಲಾಲು:ಸರಕಾರಿ ಪದವಿ ಪೂರ್ವ ಕಾಲೇಜು ಮತ್ತು ಪ್ರೌಢಶಾಲಾ ವಿಭಾಗ ವತಿಯಿಂದ ಸ್ವರ್ಣ ಪದಕ ಪ್ರಧಾನ ಸಮಾರಂಭ

ನಾಲ್ಕೂರು ನರಸಿಂಗ ರಾವ್ ಸ್ಮಾರಕ ಸರಕಾರಿ ಪದವಿ ಪೂರ್ವ ಕಾಲೇಜು, ಶಿರ್ಲಾಲು ಪ್ರೌಢಶಾಲಾ ವಿಭಾಗ ಮತ್ತು ಕಾಲೇಜು ವಿಭಾಗದ 2024 25 ನೇ ಸಾಲಿನ ಎಸ್.ಎಸ್. ಎಲ್.ಸಿ ಪಬ್ಲಿಕ್ ಪರೀಕ್ಷೆಯಲ್ಲಿ ತರಗತಿಗೆ ಪ್ರಥಮ ಸ್ಥಾನಿಗಳಾದ ಓರ್ವ ಬಾಲಕ ಮತ್ತು ಬಾಲಕಿಗೆ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಲಾ ಮತ್ತು ವಾಣಿಜ್ಯವಿಭಾಗದಲ್ಲಿ ಪ್ರಥಮ ಸ್ಥಾನಿಗಳಾದ ವಿದ್ಯಾರ್ಥಿಗಳಿಗೆ ಬಂಗಾರದ ಪದಕ ಪ್ರಧಾನ ಕಾರ್ಯಕ್ರಮ, ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ ಮತ್ತು ಕೆ. ಕಮಲಾಕ್ಷ ಕಾಮತ್ ಖ್ಯಾತ ಲೆಕ್ಕ ಪರಿಶೋಧಕರು ಕಾರ್ಕಳ ಇವರ ವತಿಯಿಂದ ನೀಡಲ್ಪಟ್ಟ ಸಭಾಂಗಣಕ್ಕೆ ಸಂಪೂರ್ಣ ಫ್ಯಾನ್ ಅಳವಡಿಕೆ ಹಾಗೂ ಹ್ಯಾಲೋಜನ್ ದೀಪದ ಉದ್ಘಾಟನಾ ಸಮಾರಂಭ ಶಾಲಾ ಸಭಾಂಗಣದಲ್ಲಿ ಜರುಗಿತು.

ನೂತನವಾಗಿ ಅಳವಡಿಸಿದ ಫ್ಯಾನ್ ಹಾಗೂ ಹ್ಯಾಲೋಜನ್ ದೀಪವನ್ನು ಉದ್ಘಾಟಿಸಿ ಕೆ.ಕಮಲಾಕ್ಷ ಕಾಮತ್ ಮಾತನಾಡಿ ವಿದ್ಯಾರ್ಥಿಗಳು ಸಂಸ್ಕಾರಯುತ ಜೀವನವನ್ನು ನಡೆಸಬೇಕು ಗುರು ಹಿರಿಯರ ಆದರ್ಶವನ್ನು ಪಾಲಿಸಬೇಕು ಮತ್ತು ಗುರುಗಳು ತೋರಿದ ಸನ್ಮಾರ್ಗದಲ್ಲಿ ನಡೆಯಬೇಕು ಎಂಬ ಹಿತ ವಚನಗಳನ್ನು ನೀಡಿದರು.ಸುಮಂಗಲ ಚಾರಿಟೇಬಲ್ ಟ್ರಸ್ಟ್ (ರಿ) ಶಿರ್ಲಾಲು ಇದರ ವತಿಯಿಂದ ಅಧ್ಯಕ್ಷರಾದ ಶ್ರೀ ಕೆ. ಗುಣಪಾಲ ಕಡಂಬ ,ಪುತ್ರರಾದ ಜೀವಿತೇಶ್ ಕಡಂಬ, ಪುತ್ರಿ ಸುನೈನಾ ಪ್ರೀತಂ ಹಾಗೂ ಅಳಿಯ ಪ್ರೀತಮ್ ಜೊತೆ ಸೇರಿ ಎಸ್. ಎಸ್. ಎಲ್. ಸಿ ಯಲ್ಲಿ ಪ್ರಥಮ ಸ್ಥಾನಿಯಾದ ಪ್ರಗತಿ ಶೆಟ್ಟಿ ಮತ್ತು ಧನುಷ್ ವಿ ಕುಲಾಲ್ ಇವರಿಗೆ ಬಂಗಾರದ ಪದಕವನ್ನಿತ್ತು ಸನ್ಮಾನಿಸಿದರು.

ಆಸ್ಪೈರ್ ಟ್ರಸ್ಟ್(ರಿ) ಮಣಿಪಾಲ ಇದರ ಪ್ರವರ್ತಕರಾದ ಶ್ರೀ ಸುಭಾಷ್ ಚಂದ್ರ ಸಂಕಲ್ಕರ್ ಡಾ. ಗಿರೀಶ್ ಮೆನನ್ ಹಾಗೂ ಶ್ರೀಮತಿ ತೃಪ್ತಿ ನಾಯಕ್ ಜೊತೆ ಸೇರಿ ವಾಣಿಜ್ಯ ಹಾಗೂ ಕಲಾ ವಿಭಾಗದಲ್ಲಿ ಪ್ರಥಮ ಸ್ಥಾನಿಗಳಾದ ಸುವೀಕ್ಷಾ ಹಾಗೂ ಪ್ರಜ್ಞಾ ಇವರನ್ನು ಚಿನ್ನದ ಪದಕವನ್ನಿತ್ತು ಗೌರವಿಸಿದರು. ಶಾಲಾ ಹಳೆ ವಿದ್ಯಾರ್ಥಿ ಸಂಘ ಎಸ್.ಎಸ್.ಎಲ್.ಸಿ ಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಾದ ಸಮೀಕ್ಷಾ ಎಸ್ ಪೂಜಾರಿ ,ನಿಕಿತಾ,ನವ್ಯ, ರಕ್ಷಾ,ಸುರಕ್ಷಾ ಕುಲಾಲ್, ಸಿಂಚನಾ ಇವರನ್ನು ಸನ್ಮಾನಿಸಿ ಅಭಿನಂದಿಸಿದರು. ರಾಜ್ಯಶಾಸ್ತ್ರ ಉಪನ್ಯಾಸಕಿ ಶ್ರೀಮತಿ ಬಬಿತಾ ಪ್ರಸಾದ್ ಮತ್ತು ಮಂಜುನಾಥ ಪ್ರಸಾದ್ ದಂಪತಿ ,ಅವರ ತಂದೆ ತಾಯಿಯ ಹೆಸರಿನಲ್ಲಿ ಜೊತೆ ಸೇರಿ ವಾಣಿಜ್ಯ ಹಾಗೂ ಕಲಾ ವಿಭಾಗದಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಾದ ಸಾಕ್ಷಿ ಶೆಟ್ಟಿ, ಸ್ವಾತಿ ದೇವಾಡಿಗ, ಮಹಮ್ಮದ್ ಸುಹೈಲ್ ,ಸ್ವಾತಿ ನಾಯ್ಕ ಇವರನ್ನು ಸನ್ಮಾನಿಸಿ ಅಭಿನಂದಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ವಿದ್ಯಾಂಗ ಉಪನಿರ್ದೇಶಕರಾದ ಶ್ರೀ ಲೋಕೇಶ್ ಹಾಗೂ ಪದವಿಪೂರ್ವ ಇಲಾಖೆ ಉಪ ನಿರ್ದೇಶಕರಾದ ಮಾರುತಿ, ಕ್ಷೇತ್ರ ಶಿಕ್ಷಣಾಧಿಕಾರಿಯಾದ ಗಿರಿಜಮ್ಮ , ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ರವಿಚಂದ್ರ ಕಾರಂತ್ ಇವರು ಭಾಗವಹಿಸಿದ್ದರು.ವೇದಿಕೆಯಲ್ಲಿ ರೋಟರಿ ಕ್ಲಬ್ ನ ಅಧ್ಯಕ್ಷರಾದ ನವೀನ್ ಚಂದ್ರ ಶೆಟ್ಟಿ , ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಶಾಂತಿರಾಜ್ ಜೈನ್ , ವಕೀಲರಾದ ಸೂರಜ್ ಜೈನ್ ,ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶೀತಲ್ ಜೈನ್ ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೆ ಪ್ರಸ್ತಾವಿಕ ನುಡಿಯೊಂದಿಗೆ ಪ್ರಾಂಶುಪಾಲ ಬೇಬಿ ಕೆ ಈಶ್ವರ ಮಂಗಲ ಸ್ವಾಗತಿಸಿದರು. ಶಿಕ್ಷಕರಾದ ನಾರಾಯಣ ಪೂಜಾರಿ ಎನ್ ,ಮಹಾಲಕ್ಷ್ಮಿ ಉಪನ್ಯಾಸಕರಾದ ಉದಯ್ ದೇವಾಡಿಗ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು. ಮುಖ್ಯ ಶಿಕ್ಷಕ ನರಸಿಂಹ ನಾಯಕ್ ವಂದಿಸಿದರು. ಕಾರ್ಯಕ್ರಮವನ್ನು ಶಿಕ್ಷಕ ಸತೀಶ್ ನಿರೂಪಿಸಿದರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page