ಜನಪ್ರತಿನಿಧಿ ಕಾನೂನನ್ನು ಗೌರವಿಸಬೇಕೆ ಹೊರತು ಅಗೌರವ ತರುವಂತಹ ಕಾರ್ಯವನ್ನು ಮಾಡಬಾರದು…!
ಮಂಜುನಾಥ್ ಜೋಗಿ
ಉಡುಪಿ ಜಿಲ್ಲಾ ಯುವ ಕಾಂಗ್ರೆಸ್
ಪ್ರಧಾನ ಕಾರ್ಯದರ್ಶಿ

ರಾಜ್ಯ ವಾಲ್ಮೀಕಿ ಅಭಿವೃದ್ಧಿ ನಿಗಮದ ಪ್ರಕರಣ ಹಾಗೂ ಮೈಸೂರಿನ ಮೂಡಾ ಪ್ರಕರಣವನ್ನು ಬಿಜೆಪಿ ನಾಯಕರು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ.
ಮುಖ್ಯಮಂತ್ರಿಗಳ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹಾಗೂ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರ ನೇತೃತ್ವದಲ್ಲಿ ಬುಧವಾರ ಬೆಳಿಗ್ಗೆ ಕುಮಾರಕೃಪಾ ವಸತಿಗೃಹದಿಂದ ಕಾಲ್ನಡಿಗೆ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮನೆಗೆ ಮುತ್ತಿಗೆ ಹಾಕಲು ಹೊರಟಿದ್ದರು.
ಈ ವೇಳೆ ಬಿಜೆಪಿ ನಾಯಕರನ್ನು ಪೊಲೀಸರು ಮಾರ್ಗದಲ್ಲೇ ತಡೆದು, ಬಂಧಿಸಿ ಕರೆದುಕೊಂಡು ಹೋಗುವ ಸಂದರ್ಭ ಕಾರ್ಕಳ ಶಾಸಕ ವಿ ಸುನಿಲ್ ಕುಮಾರ್ ಪೊಲೀಸರನ್ನು ತಳ್ಳಿ ದಬ್ಬಾಳಿಕೆ ಮಾಡಿದ್ದು ಎಷ್ಟರ ಮಟ್ಟಿಗೆ ಸರಿ?ಶಾಸಕನೆಂಬ ಧರ್ಪದಿಂದ ಪೊಲೀಸರ ಮೇಲೆ ಕೈ ಹಾಕಲು ಅಧಿಕಾರ ಕೊಟ್ಟದು ಯಾರು? ಒಬ್ಬ ಜನ ಪ್ರತಿನಿಧಿಯಾಗಿ ನಮ್ಮ ನೆಲದ ಕಾನೂನನ್ನು ಗೌರವಿಸಿ ಜನರಿಗೆ ಸ್ಪೂರ್ತಿ ಆಗಬೇಕೆ ಹೊರತು ಕಾನೂನಿಗೆ ಅಗೌರವ ತರುವಂತಹ ಕೆಲಸ ಮಾಡೋದು ಸರಿಯಲ್ಲ ಎಂದು ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಮಂಜುನಾಥ್ ಜೋಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.