ಆರೋಗ್ಯ ನಿಧಿ ಮತ್ತು ಮರಣ ಸಾಂತ್ವನ ನಿಧಿ ವಿತರಣೆ

ಶಾಮಿಯಾನ ಸಂಯೋಜಕರ ಒಕ್ಕೂಟ ರಿ. ಉಡುಪಿ ಜಿಲ್ಲೆಯಿಂದ ಕೊಡಲ್ಪಡುವ ಆರೋಗ್ಯ ನಿಧಿಯನ್ನು ಸತೀಶ್ ಶೆಣೈ ಚಿನ್ನು ಶಾಮಿಯಾನ ಕಾರ್ಕಳ ಬೋಳ ಹಾಗೂ ಮರಣ ಸಾಂತ್ವನ ನಿಧಿಯನ್ನು ಕಾರ್ಕಳ ವಲಯದ ಶಾಮಿಯಾನ ಸದಸ್ಯರಾಗಿದ್ದ ದಿವಂಗತ ವಿಜಯ ನಾಯಕ್ ಇವರ ಪತ್ನಿ ವಿದ್ಯಾ ಇವರಿಗೆ ನೀಡಲಾಯಿತು.
ಈ ಸಂದರ್ಭದಲ್ಲಿ ಕಾರ್ಕಳ ವಲಯದ ಅಧ್ಯಕ್ಷರಾದ ಓಜ್ವಲ್ಡ್ ಪಿಂಟೋ ಇವರ ಅನುಮತಿಯ ಮೇರೆಗೆ ವಲಯದ ಉಪಾಧ್ಯಕ್ಷರಾದ ಶಿವಾಜಿ ರಾವ್, ಮಾಜಿ ಅಧ್ಯಕ್ಷರಾದ ರಮೇಶ್ ಮೊಯ್ಲಿ, ವಲಯ ಕಾರ್ಯದರ್ಶಿಯಾದ ಗುರುಕಿರಣ್ ಮೊಯ್ಲಿ, ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ತಾಜುದ್ದೀನ್ ಕಾರ್ಕಳ ಇವರ ಸಮ್ಮುಖದಲ್ಲಿ ,ಫಲಾನುಭವಿಗಳಿಗೆ ಒಟ್ಟು 43,000 ರೂ.ಗಳ ಚೆಕ್ಕನ್ನು ವಿತರಿಸಲಾಯಿತು.


























































