ಧ್ವಜಾರೋಹಣ ಉದ್ಯಮಿಗಳಾದ ಜಗದೀಶ್ ಮಲ್ಯ, ದೀಪ ಪ್ರಜ್ವಲನೆ ವಿನ್ಯಾಸ್ ಟ್ರೇಡರ್ಸ್ ಮಾಲಕರಾದ ನರಸಿಂಹ ಪ್ರಭು
ಅಂತರಾಷ್ಟ್ರೀಯ ಮಟ್ಟದ ಕ್ರೀಡಾಪಟು ವಿದ್ಯಾ ವಿಜೇತ ಪೈ ಇವರಿಗೆ ಗೌರವ

77ನೇ ವರ್ಷದ ಗಣರಾಜ್ಯೋತ್ಸವ ದಿನಾಚರಣೆಯ ಧ್ವಜಾರೋಹಣವನ್ನು ಖ್ಯಾತ ಉದ್ಯಮಿಗಳಾದ ಜಗದೀಶ್ ಮಲ್ಯ ಇವರು ನೆರವೇರಿಸಿದರು
ಸಭಾ ಕಾರ್ಯಕ್ರಮವನ್ನು ವಿನ್ಯಾಸ್ ಟ್ರೇಡರ್ಸ್ ಮಾಲ್ಹಕರಾದ ನರಸಿಂಹ ಪ್ರಭು ಇವರು ದೀಪ ಪ್ರಜ್ವಲಿಸಿ ಉದ್ಘಾಟಿಸಿ ಶುಭ ಹಾರೈಸಿದರು.

ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟು ಶ್ರೀಮತಿ ವಿದ್ಯಾ ವಿಜೇತ ಪೈ ಇವರಿಗೆ ಶಾಲಾ ವತಿಯಿಂದ ಗೌರವ ಸಮರ್ಪಿಸಲಾಯಿತು.
ಮುಖ್ಯ ಅತಿಥಿಗಳಾಗಿ ಕಾರ್ಕಳ ಮೆಸ್ಕಾಂನ ಅಕೌಂಟ್ಸ್ ಆಫೀಸರ್ ಗಿರೀಶ್ ರಾವ್, ಉದ್ಯಮಿಗಳಾದ ಗೋಪಾಲ ಶೆಟ್ಟಿ, ವಿಜೇತ ವಿಶೇಷ ಶಾಲಾ ಅಧ್ಯಕ್ಷರು ರತ್ನಾಕರ್ ಅಮೀನ್, ದುರ್ಗಾ ವಿದ್ಯಾ ಸಂಘದ ಅಧ್ಯಕ್ಷರಾದ ಕೆ.ರಾಧಾಕೃಷ್ಣ ಶೆಟ್ಟಿ, ಸಿ. ಎಸ್. ಆರ್ ಮುಖ್ಯಸ್ಥರಾದ ಜಯಾನಂದ್ ಪೀಟರ್, ಸಂಸ್ಥಾಪಕಿ ಡಾ. ಕಾಂತಿ ಹರೀಶ್, ಮ್ಯಾನೇಜಿಂಗ್ ಟ್ರಸ್ಟಿ ಹರೀಶ್ ಉಪಸ್ಥಿತರಿದ್ದರು.

ವಿಶೇಷ ಶಿಕ್ಷಕಿ ಶ್ರೀಮತಿ ಹರ್ಷಿತಾ ಕಿರಣ್ ನಿರೂಪಿಸಿದ ಕಾರ್ಯಕ್ರಮದಲ್ಲಿ ಡಾ. ಕಾಂತಿ ಹರೀಶ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು ವಿಶೇಷ ಶಿಕ್ಷಕಿ ಶ್ರೀಮತಿ ಸುಮನಾ ವಂದಿಸಿದರು. ಪೋಷಕರು ಮಕ್ಕಳು ಹಾಗೂ ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.




















