ಔಷಧೀಯ ಗಿಡಗಳನ್ನು ನೆಡುವ ಮೂಲಕ “ವನಮಹೋತ್ಸವ ಸಂಭ್ರಮ”

ವರ್ಧಮಾನ ಪೂರ್ವ ಪ್ರಾಥಮಿಕ ಶಾಲೆ , ಕಾರ್ಕಳ ಇಲ್ಲಿಯ ಯುಕೆಜಿ “ಬನ್ನಿಸ್” ತಂಡದ ಪುಟಾಣಿಗಳಿಗೆ ಔಷಧೀಯ ಗಿಡಗಳನ್ನು ಪರಿಚಯಿಸಿ, ಅದರ ಉಪಯೋಗಗಳನ್ನು ತಿಳಿಸಲಾಯಿತು.
40 ವಿದ್ಯಾರ್ಥಿಗಳು ಸಸಿಗಳನ್ನು ನೆಡುವ ಮುಖಾಂತರ ವನಮಹೋತ್ಸವವನ್ನು ಆಚರಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಸಂಚಾಲಕಿ, ಫ್ಲಾಕ್ ಲೀಡರ್ ಶ್ರೀಮತಿ ಶಶಿಕಲಾ ಕೆ ಹೆಗ್ಡೆ, ಬನ್ನಿಸ್ ಲೀಡರ್ ಶ್ರೀಮತಿ ಸ್ಮಿತಾ ಹಾಗೂ ಶಿಕ್ಷಕಿ ಯರು ಉಪಸ್ಥಿತರಿದ್ದರು.