ಹಿಂದುಗಳೆಲ್ಲ ಹಿಂಸೆ ಮಾಡುವವರು ಎಂಬ ಆರೋಪ, ವಿಶ್ವದ ಭಾರತೀಯ ನಾಗರಿಕರಿಗೆ ಮಾಡಿರುವ ಅಪಮಾನ: ಶಾಸಕ ವಿ.ಸುನಿಲ್ ಕುಮಾರ್

ಲೋಕಸಭಾಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸದನದಲ್ಲಿ ಮಾತನಾಡುವ ಸಂದರ್ಭ ,ಹಿಂದೂ ಧರ್ಮ ಹಿಂಸೆಯನ್ನು ಪಸರಿಸಿದೆ .ಇಲ್ಲಿ ತಮ್ಮನ್ನು ಹಿಂದುಗಳೆಂದು ಹೇಳಿಕೊಳ್ಳುತ್ತಿರುವವರು, ಹಿಂಸಾಚಾರಕ್ಕೆ ಪ್ರೋತ್ಸಾಹ ನೀಡುತ್ತಿದ್ದಾರೆ. ದೇಶದಲ್ಲಿ ಬಿಜೆಪಿಯು ದೇಶದಲ್ಲಿ ಹಿಂಸಾಚಾರ, ದ್ವೇಷ , ಭಯವನ್ನು ಹರಡುತ್ತಿದೆ ಎಂದು ಆರೋಪ ಮಾಡಿದ್ದು ಬಿಜೆಪಿ ಶಾಸಕರು ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿ. ಸುನಿಲ್ ಕುಮಾರ್,ಚುನಾವಣಾ ಹಿಂದು ರಾಹುಲ್ ಗಾಂಧಿ ಹಿಂದುಗಳೆಲ್ಲ ಹಿಂಸೆ ಮಾಡುವವರು ಎಂದು ಸಂಸತ್ತಿನಲ್ಲಿ ಮಾಡಿರುವ ಆರೋಪ ಸಮಸ್ತ ಹಿಂದು ಸಮಾಜ ಮಾತ್ರವಲ್ಲ, ಇಡಿ ಭಾರತೀಯ ನಾಗರಿಕರಿಗೆ ಮಾಡಿರುವ ಅಪಮಾನ.ಶತಶತಮಾನಗಳಿಂದ ” ವಿದೇಶಿ” ದಬ್ಬಾಳಿಕೆ ಸಹಿಸಿಕೊಂಡು, ಸ್ವಾಭಿಮಾನದಿಂದ ಬದುಕುತ್ತಿರುವ ಹಿಂದುಗಳು ಎಲ್ಲರನ್ನೂ ಒಳಗೊಳ್ಳುವವರೇ ಹೊರತು ಹಿಂಸಿಸುವವರಲ್ಲ ಎಂದಿದ್ದಾರೆ.
ಹಿಂದು ವಿರೋಧಿ ಧೋರಣೆ ಕಾಂಗ್ರೆಸ್ ಹಾಗೂ ಅದರ ಮಿತ್ರಕೂಟಗಳ ರಕ್ತದಲ್ಲೇ ಇದೆ. ಈ ಹಿಂದೆ ಡಿಎಂಕೆಯ ಸಚಿವ ಉದಯನಿಧಿ ಸನಾತನ ಧರ್ಮವನ್ನು ಅವಹೇಳನ ಮಾಡಿದ್ದರು. ರಾಜ್ಯ ಕಾಂಗ್ರೆಸ್ ಸರ್ಕಾರದ ಲೋಕೋಪಯೋಗಿ ಸಚಿವ ಹಿಂದು ಶಬ್ದಕ್ಕೇ ಅಪಮಾನ ಮಾಡಿದ್ದರು. ಇದೀಗ ರಾಹುಲ್ ಗಾಂಧಿ ಸಂಸತ್ತಿನೊಳಗೆ ಹಿಂದುಗಳಿಗೆ ಅಪಮಾನ ಮಾಡಿದ್ದಾರೆ. ಇನ್ನೆಷ್ಟು ದಿನ ಈ ವಿರೋಧ? ಎಂದು ಪ್ರಶ್ನಿಸಿದ್ದಾರೆ.