
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮೂರನೇ ಪ್ರಧಾನಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ ಲೋಕಸಭೆಯಲ್ಲಿ ತನ್ನ ಭಾಷಣಕ್ಕೆ ಅಡ್ಡಿಪಡಿಸುತ್ತಿದ್ದ ಪ್ರತಿಪಕ್ಷ ಸದಸ್ಯರಿಗೆ ಕುಡಿಯಲು ನೀರು ನೀಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ಹರಿದಾಡುತ್ತಿದೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಭಾಷಣದ ಮೇಲಿನ ವಂದನಾ ನಿರ್ಣಯ ಮೇಲೆ ಮೋದಿ ಭಾಷಣ ಮಾಡಿದ್ದು ಈ ವೇಳೆ ಮೋದಿ ಭಾಷಣ ಮಾಡಲು ಮುಂದಾಗುತ್ತಿದ್ದಂತೆ ಪ್ರತಿ ಪಕ್ಷದ ಸದಸ್ಯರ ʼಮಣಿಪುರ್ ಗೋʼ, ʼಮಣಿಪುರ್ ವಾಂಟ್ ಜಸ್ಟಿಸ್ʼ, ʼಅಗ್ನಿವೀರ್ʼ ಇತ್ಯಾದಿ ಘೋಷಣೆ ಕೂಗಿ ಪ್ರತಿಭಟನೆ ನಡೆಸಲು ಆರಂಭಿಸಿದರು.
ಸ್ಪೀಕರ್ ಓಂ ಬಿರ್ಲಾ ಪ್ರತಿಭಟನೆ ನಡೆಸುತ್ತಿದ್ದವರಿಗೆ ಅಲ್ಲಿಂದ ತೆರಳುವಂತೆ ಸೂಚಿಸಿದರೂ ಅವರು ತೆರಳದೇ ಪ್ರತಿಭಟನೆ ಮುಂದುವರಿಸುತ್ತಲೇ ಇದ್ದಿದ್ದರಿಂದ ಪ್ರತಿಪಕ್ಷಗಳ ಸದಸ್ಯರು ಪ್ರತಿಭಟನೆ ನಿಲ್ಲಿಸುವುದಿಲ್ಲ ಎನ್ನುವುದು ಮೋದಿಗೆ ತಿಳಿದು ಪ್ರಧಾನಿ ಮೋದಿ 2 ಗಂಟೆ 15 ನಿಮಿಷ ಸುದೀರ್ಘವಾಗಿ ಮಾತನಾಡಿದರು. ಪ್ರತಿಭಟಿಸುತ್ತಿದ್ದ ಕೆಲ ಸದಸ್ಯರು ಕಿರುಚಿ ಸುಸ್ತಾಗಿದ್ದು ಇದನ್ನು ಗಮನಿಸಿದ ಮೋದಿ ತನಗೆ ನೀಡಿದ್ದ ನೀರನ್ನು ಪ್ರತಿಪಕ್ಷದ ಸದಸ್ಯರಿಗೆ ನೀಡಿದರು. ಒಬ್ಬರು ಸದಸ್ಯರು ನೀರನ್ನು ಕುಡಿದರು. ಮೋದಿ ಭಾಷಣಕ್ಕೆ ವಿಪಕ್ಷ ಸದಸ್ಯರು ಅಡ್ಡಿ ಪಡಿಸಿದ್ದಕ್ಕೆ ಸದನ ಕೊನೆಗೆ ಖಂಡನಾ ಗೊತ್ತುವಳಿಯನ್ನು ಅಂಗೀಕರಿಸಿತು