2024-25 ನೇ ಸಾಲಿನ ಅಧ್ಯಕ್ಷರಾಗಿ Rtr. ಸುನಿಲ್ ನಾಯಕ್

ಕಾರ್ಕಳ : ರೋಟರಾಕ್ಟ್ ಕ್ಲಬ್ ಕಾರ್ಕಳ ಇದರ 2024-25 ನೇ ಸಾಲಿನ ಪದಗ್ರಹಣ ಕಾರ್ಯಕ್ರಮವು ದಿನಾಂಕ 07-07-2024 ರಂದು ಕಾರ್ಕಳದ ಶ್ರೀ ಭುವನೇಂದ್ರ ಕಾಲೇಜಿನ SR ಹಾಲ್ ನಲ್ಲಿ ಜರಗಿತು. ರೋಟರಿ ಕ್ಲಬ್ ಕಾರ್ಕಳ ಇದರ ಅಧ್ಯಕ್ಷರಾದ Rtn. ಇಕ್ಬಾಲ್ ಅಹಮದ್ ಇವರು ಪದಗ್ರಹಣವನ್ನು ನೆರವೇರಿಸಿಕೊಟ್ಟರು. ಪದಗ್ರಹಣ ನೆರವೇರಿಸಿ ಮಾತನಾಡಿದ ಅವರು, ತಮ್ಮ ರೋಟರಾಕ್ಟ್ ಜೀವನದ ಅನುಭವವನ್ನು ಹಂಚಿಕೊಂಡರು.
2024-25 ನೇ ಸಾಲಿನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ Rtr. ಸುನಿಲ್ ನಾಯಕ್ ಇವರು ತಮ್ಮ ಒಂದು ವರ್ಷದ ಕಾರ್ಯ ಯೋಜನೆಗಳನ್ನು ಸಭೆಯಲ್ಲಿ ಹಂಚಿಕೊಂಡರು ಮತು ತಮ್ಮ ಕಾರ್ಯಕಾರಿಣಿ ಸಮಿತಿಯ ಸದಸ್ಯರನ್ನು ಸಭೆಗೆ ಪರಿಚಯಿಸಿದರು.
ಈ ಸಂದರ್ಭದಲ್ಲಿ ಡೆಂಗ್ಯೂ ಮತ್ತು ಪ್ಲಾಸ್ಟಿಕ್ ನಿರ್ಮೂಲನ ಕ್ರಮಗಳ ಬಗ್ಗೆ ಕರಪತ್ರವನ್ನು ಬಿಡುಗಡೆಗೊಳಿಸಲಾಯಿತು.
ಈ ಸಂದರ್ಭದಲ್ಲಿ ರೋಟರಿ ಜಿಲ್ಲೆ, 3182ರ ಜಿಲ್ಲಾ ಗವರ್ನರ್ Rtn. MPHF CA ದೇವ್ ಆನಂದ್,2023-24 ನೇ ಸಾಲಿನ ಜಿಲ್ಲಾ ರೋಟರಾಕ್ಟ್ ಸಭಾಪತಿ Rtn. MPHF ಸುಬ್ರಹ್ಮಣ್ಯ ಬಾಸ್ರಿ, 24-25 ನೇ ಸಾಲಿನ ಜಿಲ್ಲಾ ಸಭಾಪತಿ Rtn. PHF ನವೀನ್ ಅಮೀನ್, ವಲಯ-5 ರ ಸಹಾಯಕ ಗವರ್ನರ್ Rtn. ಅನಿಲ್ ಡೇಸಾ, ವಲಯ-5ರ ವಲಯ ಸೇನಾನಿ Rtn. ಸುರೇಶ್ ನಾಯಕ್, ರೋಟರಿ ಕ್ಲಬ್ ಕಾರ್ಕಳದ ಅಧ್ಯಕ್ಷರಾದ Rtn. ಇಕ್ಬಾಲ್ ಅಹಮದ್,ರೋಟರಾಕ್ಟ್ ಅಧ್ಯಕ್ಷರಾದ ಸುನಿಲ್ ನಾಯಕ್, ಸಭಾಪತಿಗಳಾದ Rtn. PHF ನಿರಂಜನ್ ಜೈನ್ , Rtn. ಶಶಿಕಲಾ ಹೆಗ್ಡೆ, ಜಿಲ್ಲಾ ರೋಟರಾಕ್ಟ್ ಕಾರ್ಯದರ್ಶಿ ಶಂಕರ್ ಕುಡ್ವ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. 23-24 ನೇ ಸಾಲಿನ ಅಧ್ಯಕ್ಷರಾದ Rtr. ನಿಶ್ಚತ್ ಶೆಟ್ಟಿ ಸ್ವಾಗತಿಸಿ, Rtr. ಶಂಕರ್ ಕುಡ್ವ ವಂದಿಸಿ ಮಾಜಿ ಜಿಲ್ಲಾ ಪ್ರತಿನಿಧಿ Rtr. ಪ್ರಶಾಂತ ಆಚಾರ್ಯ ಇವರು ಕಾರ್ಯಕ್ರಮ ನಿರೂಪಿಸಿದರು.