
ಬೆಂಗಳೂರು: ರೇಣುಕಾ ಸ್ವಾಮಿ ಕೊಲೆಯಾದ ಶನಿವಾರ ದರ್ಶನ್ ಜೊತೆ ಸ್ಯಾಂಡಲ್‌ವುಡ್‌ನ ಸ್ಟಾರ್ ಹಾಸ್ಯ ನಟ ಚಿಕ್ಕಣ್ಣ ಪಾರ್ಟಿ ಮಾಡಿದ್ದರು ಎಂಬ ವಿಚಾರ ಬೆಳಕಿಗೆ ಬಂದಿದ್ದು ಇದೀಗ ದರ್ಶನ್ ಬಂಧನದಿಂದ ಸ್ಟಾರ್ ಚಿಕ್ಕಣ್ಣನ ಎದೆಯಲ್ಲಿ ಢವ ಢವ ಶುರುವಾಗಿದೆ.
ಶನಿವಾರ ಮಧ್ಯಾಹ್ನನಿಂದ ಸ್ಟೋನಿಬ್ರೂಕ್‌ನಲ್ಲಿ ದರ್ಶನ್ ಅಂಡ್ ಗ್ಯಾಂಗ್ ಪಾರ್ಟಿ ಮಾಡ್ತಿದ್ದು ಈ ವೇಳೆ ದರ್ಶನ್ ಜೊತೆ ಚಿಕ್ಕಣ್ಣ ಪಾರ್ಟಿಯಲ್ಲೇ ಇದ್ದರೆಂದು ತಿಳಿದುಬಂದಿದೆ. ಅಲ್ಲದೇ ಸಂಜೆ ವೇಳೆಗೆ ಸ್ವಲ್ಪ ಕೆಲಸ ಇದೆ ಅಂತಾ ದರ್ಶನ್ ಎದ್ದು ಹೊರಟಿದ್ದರು. ಹೀಗಾಗಿ ಚಿಕ್ಕಣ್ಣ ಇನ್ನು ಯಾವುದೇ ಕ್ಷಣದಲ್ಲಾದ್ರು ಕಾಮಾಕ್ಷಿಪಾಳ್ಯ ಪೊಲೀಸ್ರು ಸಂಪರ್ಕಿಸಬಹುದು ಎನ್ನುವ ಭಯದಲ್ಲಿದ್ದಾರೆ.
ಸದ್ಯ ಚಿಕ್ಕಣ್ಣನನ್ನು ಸಾಕ್ಷಿಯಾಗಿ ಪರಿಗಣಿಸಲು ಪೊಲೀಸರು ಮುಂದಾಗಿದ್ದು, ಈ ಬಗ್ಗೆ ಪೊಲೀಸರು ಚಿಂತನೆ ನಡೆಸಿದ್ದಾರೆ. ಕೊಲೆಯ ಬಗ್ಗೆ ಮಾಹಿತಿ ಇಲ್ಲದೆ ಇದ್ದರೂ ಕೂಡ, ಪಾರ್ಟಿಯಲ್ಲಿದ್ದ ಎಂಬ ಕಾರಣಕ್ಕೆ ಸಾಕ್ಷಿಯಾಗಿ ಪರಿಗಣನೆ ಮಾಡಿಕೊಳ್ಳಲು ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಪೊಲೀಸರು ಚರ್ಚೆ ನಡೆಸುತ್ತಿದ್ದಾರೆ. ಇನ್ನು ಘಟನೆ ನಡೆಯುವ ಮುಂಚೆಯೇ ಪಾರ್ಟಿ ಮುಗಿಸಿ ಚಿಕ್ಕಣ್ಣ ತೆರಳಿದ್ದರು.