
ವಿಶ್ವ ಆರೋಗ್ಯ ಸಂಸ್ಥೆಯ ನಿರ್ದೇಶನ ಹಾಗೂ ಕೇಂದ್ರ ಸರಕಾರದ ಮಹತ್ವಕಾಂಕ್ಷೆ ಆಶಯದಲ್ಲಿ ಪ್ರಧಾನ ಮಂತ್ರಿ ಕ್ಷಯಮುಕ್ತ ಭಾರತ ಅಭಿಯಾನ (PMTBMBA) ನಿಕ್ಷಯ್ ಮಿತ್ರ ಯೋಜನೆಯ ಮೂಲಕ 2025 ರೊಳಗೆ ಕ್ಷಯಮುಕ್ತ ಭಾರತ ಮಾಡುವ ದಿಟ್ಟ ಸಂಕಲ್ಪದಲ್ಲಿ ಕಾರ್ಕಳದ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯು ಕಾರ್ಕಳ ಹಾಗೂ ಹೆಬ್ರಿ ತಾಲೂಕಿನ 54 ಆಯ್ದ ಕ್ಷಯರೋಗಿಗಳಿಗೆ ದಿನಾಂಕ 15.03.2025 ರಂದು ಸರಕಾರಿ ಸಾರ್ವಜನಿಕ ಆಸ್ಪತ್ರೆ ಕಾರ್ಕಳ ಇಲ್ಲಿ 54000/- ರೂಪಾಯಿಯ ಮೌಲ್ಯದ ಪೌಷ್ಟಿಕ ಆಹಾರದ ಕಿಟ್ ವಿತರಿಸಲಾಯಿತು. ತಾಲೂಕು ಆರೋಗ್ಯಾಧಿಕಾರಿ ಡಾ. ಸಂದೀಪ್ ಕುಡ್ವ ಇವರು ಪ್ರಾಸ್ತವಿಕ ಮಾತನಾಡಿ 2025 ರೊಳಗೆ ಕ್ಷಯಮುಕ್ತ ಭಾರತ ಮಾಡುವ ಕೇಂದ್ರ ಸರಕಾರದ ಮಹತ್ವಕಾಂಕ್ಷೆ ಯೋಜನೆಗೆ ಸರಕಾರೇತರ ಸಂಘ ಸಂಸ್ಥೆಗಳು ಕೈಜೋಡಿಸಿ ಮುಂದೆ ಬಂದಿರುವುದು ಶ್ಲಾಘನಿಯ ಎಂದು ಮಾತನಾಡಿ ಕ್ಷಯ ರೋಗದ ಕುರಿತು ಮಾಹಿತಿ ನೀಡಿದರು.ಭಾರತೀಯ ರೆಡ್ ಕ್ರಾಸ್ ಸೊಸೈಟಿ ಕಾರ್ಕಳ ಶಾಖೆಯ ಛೇರ್ಮನ್ ಡಾ. ಕೆ ಆರ್ ಜೋಷಿ ಮಾತನಾಡಿ TB ರೋಗವು ಅನಾದಿ ಕಾಲದಿಂದಲೂ ಮನುಕುಲವನ್ನು ಬಾಧಿಸುತ್ತಿದ್ದು ಇಲ್ಲಿಯ ತನಕ ಕ್ಷಯರೋಗ ವನ್ನು ಹೋಗಲಾಡಿಸಲು ಸಾಧ್ಯವಾಗಿಲ್ಲ ಆದರೆ ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಕೇಂದ್ರ ಸರಕಾರ ದಿಟ್ಟ ಕ್ರಮಗಳ ಮೂಲಕ 2025 ರೊಳಗೆ ಕ್ಷಯಮುಕ್ತ ಭಾರತ ಮಾಡುವಲ್ಲಿ ಮುಂದಡಿ ಇಟ್ಟಿದೆ, ಮುಖ್ಯವಾಗಿ TB ಖಾಯಿಲೆ ಬರುವುದು ಅಪೌಷ್ಟಿಕತೆ ಹಾಗೂ ರೋಗನಿರೋಧಕ ಶಕ್ತಿ ಕಡಿಮೆ ಯಾಗುವುದರಿಂದ ಈ ನಿಟ್ಟಿನಲ್ಲಿ ಕೇಂದ್ರ ಸರಕಾರದ ಕೋರಿಕೆಯಂತೆ ಎಲ್ಲಾ ಸಂಘ ಸಂಸ್ಥೆಗಳು ನಿಕ್ಷಯ್ ಮಿತ್ರ ಯೋಜನೆಯ ಮೂಲಕ ಸರಕಾರದೊಂದಿಗೆ ಕೈ ಜೋಡಿಸಿ TB ಮುಕ್ತ ಮಾಡಲು ನಾವೆಲ್ಲರೂ ಸಹಕರಿಸಬೇಕು ಆದ್ದರಿಂದ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕಾರ್ಕಳ ಶಾಖೆಯು ಕಳೆದ 5 ವರ್ಷಗಳಿಂದ ನಿರಂತರವಾಗಿ ಕ್ಷಯರೋಗಿಗಳನ್ನ ದತ್ತು ಪಡೆದು ಪೌಷ್ಟಿಕ ಆಹಾರದ ಕಿಟ್ ಗಳನ್ನು ವಿತರಿಸುತ್ತಾ ಬಂದಿದ್ದೇವೆ ಮುಂದೆಯೂ ಈ ಅಭಿಯಾನಕ್ಕೆ ರೆಡ್ ಕ್ರಾಸ್ ಸಂಸ್ಥೆ ಸಹಕಾರವನ್ನು ನೀಡುತ್ತೇವೆ ಎಂದು ತಿಳಿಸುತ್ತಾ ಆರೋಗ್ಯ ಇಲಾಖೆಯ ಕಾರ್ಯ ವೈಖರಿಗೆ ಪ್ರಸಂಶೆ ವ್ಯಕ್ತ ಪಡಿಸಿದರು. ಈ ಕಾರ್ಯಕ್ರಮದಲ್ಲಿ ರೆಡ್ ಕ್ರಾಸ್ ಕಾರ್ಕಳ ವತಿಯಿಂದ ಕಾರ್ಕಳ ಹಾಗೂ ಹೆಬ್ರಿ ತಾಲೂಕಿನ ಸುಮಾರು 54 ಆಯ್ದ ಕ್ಷಯರೋಗಿಗಳಿಗೆ ಪೌಷ್ಟಿಕ ಆಹಾರದ ಕಿಟ್ ವಿತರಿಸಿಸಲಾಯಿತು. ವೇದಿಕೆಯಲ್ಲಿ ರೆಡ್ ಕ್ರಾಸ್ ಸಂಸ್ಥೆಯ ಕೋಶಾಧಿಕಾರಿ ಶ್ರೀ ರವೀಂದ್ರನಾಥ್ ಪೈ, ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಶಶಿಕಲಾ ಹಾಗೂ ಕಚೇರಿ ಆಡಳಿತಾಧಿಕಾರಿ ಶ್ರೀಮತಿ ಭಾರತಿ ಉಪಸ್ಥಿತರಿದ್ದರು. ಇವರೊಂದಿಗೆ ರೆಡ್ ಕ್ರಾಸ್ ಕಾರ್ಕಳ ಸಂಸ್ಥೆಯ ಹಿರಿಯ ಸದಸ್ಯರಾದ ಶ್ರೀ ಇ ಜನಾರ್ಧನ ಇಡ್ಯಾ, ಶ್ರೀ ಸುರೇಶ್ ಡಿ ಭಟ್,ಶ್ರೀಮತಿ ಲಕ್ಷ್ಮಿ ಪೈ, ಶ್ರೀ ಮೋಹನ್ ದಾಸ್ ಶೆಣೈ, ಸಾರ್ವಜನಿಕ ಆಸ್ಪತ್ರೆಯ ಶ್ರುಶ್ರೂಷಕಾಧಿಕಾರಿ ಶ್ರೀಮತಿ ಕಮಲ, ಶ್ರೀಮತಿ ನಯನ ಪ್ರಯೋಗಶಾಲಾ ಮೇಲ್ವಿಚಾರಕ ಶ್ರೀ ಹರಿಪ್ರಸಾದ್ ಉಪಸ್ಥಿತರಿದ್ದರು. ಕಾರ್ಕಳ – ಹೆಬ್ರಿ ತಾಲೂಕು ಹಿರಿಯ ಚಿಕಿತ್ಸಾ ಮೇಲ್ವಿಚಾರಕ ಶಿವಕುಮಾರ್ ಇವರು ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.