
ಮಂಗಳೂರು: ಇಂದು ನಗರದ ರೊಸಾರಿಯೊ ಬಳಿ ರಿಕ್ಷಾ ತೊಳೆಯುತಿದ್ದ ವೇಳೆ ವಿದ್ಯುತ್ ತಂತಿ ತುಂಡಾಗಿ ಬಿದ್ದ ಪರಿಣಾಮ ಇಬ್ಬರು ವ್ಯಕ್ತಿಗಳು ಮೃತಪಟ್ಟ ದುರ್ಘಟನೆ ಸಂಭವಿಸಿದೆ.
ಹಾಸನ ಮೂಲದ ರಾಜು ಮತ್ತು ರಾಮಕುಂಜದ ದೇವರಾಜ್ ಎಂಬವರು ರೊಸಾರಿಯೋ ಬಳಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಇಂದು ಬೆಳಿಗ್ಗೆ ರಿಕ್ಷಾ ತೊಳೆಯುವ ಸಂದರ್ಭ ಸರ್ವಿಸ್ ವೈರ್ ತುಂಡಾಗಿ ಒಬ್ಬರ ಮೇಲೆ ಬಿದ್ದಿದೆ. ಈ ವೇಳೆ ವಿದ್ಯುತ್ ಶಾಕ್ ಗೆ ಒಳಗಾದ ವ್ಯಕ್ತಿಯನ್ನು ರಕ್ಷಿಸಲು ತೆರಳಿದ ಇನ್ನೊಬ್ಬರು ಕೂಡ ಆಘಾತಕ್ಕೆ ಒಳಗಾಗಿ ಸಾವನ್ನಪ್ಪಿದ್ದಾರೆ.