
ಕಾರ್ಕಳ: ಬೆಂಗಳೂರು ಶ್ರೀ ವೈ ಮುನಿಸ್ವಾಮಪ್ಪ ಕಲ್ಯಾಣ ಮಂಟಪ ಯಶವಂತಪುರದಲ್ಲಿ ನಡೆದ ರಾಷ್ಟ್ರ ಮಟ್ಟದ ಟೇಕ್ವಾಂಡೋ ಚಾಂಪಿಯನ್ ಶಿಪ್ ನಲ್ಲಿ ಲಕ್ಷ್ಮೀ ದೇವಿ ಆಂಗ್ಲ ಮಾಧ್ಯಮ ಶಾಲೆ ಬೋರ್ಕಟ್ಟೆಯ ವಿದ್ಯಾರ್ಥಿನಿ ಸುಧೀಕ್ಷಾ ಕ್ಯೂರುಗಿ ವಿಭಾಗದಲ್ಲಿ ಮತ್ತು ಟೆಕ್ವಿಕ್ ವಿಭಾಗದಲ್ಲಿ ಚಿನ್ನ ಮತ್ತು ಬೆಳ್ಳಿಯ ಪದಗಳನ್ನು ಗೆದ್ದು ಸಾಧನೆ ಮಾಡಿದ್ದಾರೆ.
ಇವರು ದಿವಾಕರ ಕೆ ಪೂಜಾರಿ ಮತ್ತು ಉಷಾ ದಂಪತಿಗಳ ಪುತ್ರಿ,ಸುಧೀಕ್ಷಾಳಿಗೆ ಸುರೇಶ್ ದೇವಾಡಿಗ ಕೋಚಿಂಗ್ ನೀಡುತ್ತಿದ್ದಾರೆ