
ರಾಜ್ಯ ಅತ್ಯುತ್ತಮ ಯುವ ಮಂಡಲ ಪ್ರಶಸ್ತಿ ಪುರಸ್ಕೃತ ಯುವಕ ಮಂಡಲ (ರಿ.) ಸಾಣೂರು ಮತ್ತು ಮಂಗಳೂರು ವಿದ್ಯುಚ್ಚಕ್ತಿ ಸರಬರಾಜು ಕಂಪನಿ ನಿಯಮಿತ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ (ವಿ) ಕಾರ್ಯ ಮತ್ತು ಪಾಲನ ಉಪ ವಿಭಾಗ ನಿಟ್ಟೆ ಇವರ ಸಹಕಾರದಲ್ಲಿ ಇಂದು ಬೆಳಿಗ್ಗೆ 7:00 ಗಂಟೆಯಿಂದ ಸಾಣೂರು ಗಾಡಿದಕೊಟ್ಯದಿಂದ ಸಾಣೂರು ರಿಕ್ಷಾ ನಿಲ್ದಾಣದವರೆಗೆ ವಿದ್ಯುತ್ ಕಂಬಗಳ ಮೇಲೆ ಹಾದು ಹೋಗಿರುವ ಮರದ ಕೊಂಬೆಗಳನ್ನು ತೆಗೆದು ವಿದ್ಯುತ್ ಪ್ರಸರಣಕ್ಕೆ ಅನುವು ಮಾಡಿ ಸ್ವಚ್ಛ ಮಾಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಸುಮಾರು 1 ಕೀಲೋ ಮೀಟರ್ ನಷ್ಟು ನಡೆದ ಈ ಸೇವಾ ಕಾರ್ಯದಲ್ಲಿ ಶ್ರೀ ವಿನಾಯಕ್ ಕಾಮತ್ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ (ವಿ) ನಿಟ್ಟೆ ಉಪ ವಿಭಾಗ ಶ್ರೀ ಸೋಮಯ್ಯ ಸುವರ್ಣ ಶಾಖಾಧಿಕಾರಿ ಸಾಣೂರು ಶಾಖೆ ಶ್ರೀ ಮಧು ಮೆಸ್ಕಾಂ ಅಧಿಕಾರಿ ಮೆಸ್ಕಾಂ ಪವರ್ ಮ್ಯಾನ್ ಗಳು ಹಾಗೂ ಯುವಕ ಮಂಡಲದ ಅಧ್ಯಕ್ಷರಾದ ಪ್ರಸಾದ್ ಶೆಟ್ಟಿ, ಕಾರ್ಯದರ್ಶಿ ಪ್ರಕಾಶ್ ರಾವ್ ಸಾಣೂರು, ಉಪಾಧ್ಯಕ್ಷರಾದ ಹರೀಶ್ ರಾವ್, ಜೊತೆ ಕಾರ್ಯದರ್ಶಿ ಪ್ರಮಿತ್ ಸುವರ್ಣ, ಕ್ರೀಡಾ ಕಾರ್ಯದರ್ಶಿ ವಿದ್ಯಾನಂದ ಕೋಟ್ಯಾನ್, ಸಾಂಸ್ಕೃತಿಕ ಕಾರ್ಯದರ್ಶಿ ರಾಜೇಶ್ ಪೂಜಾರಿ, ಮಂಡಲದ ಮಾಜಿ ಅಧ್ಯಕ್ಷರುಗಳಾದ ಜಗದೀಶ್ ಕುಮಾರ್, ಮಹೇಶ್ ಕುಮಾರ್, ದೇವಾನಂದ ಶೆಟ್ಟಿ ಮಂಡಲದ ಪದಾಧಿಕಾರಿಗಳು ಮತ್ತು ಸದಸ್ಯರುಗಳಾದ ಪ್ರಭಾಕರ್ ಶೆಟ್ಟಿ, ಸುದರ್ಶನ್ ನಾಯ್ಕ್, ರಮೇಶ್ ಪೂಜಾರಿ, ಮುರಳೀಧರ ಸುವರ್ಣ, ಜಯನ್ ಶೆಟ್ಟಿ, ಸತೀಶ್ ಮಡಿವಾಳ, ಜಯ ಶೆಟ್ಟಿಗಾರ್ ಇವರೆಲ್ಲ ಸೇವಾ ಕಾರ್ಯದಲ್ಲಿ ಕೈಜೋಡಿಸಿದರು. ಮೋಹನ್ ಶೆಟ್ಟಿ ಇವರು ಎಲ್ಲರನ್ನು ಸ್ವಾಗತಿಸಿ ಧನ್ಯವಾದಗೈದರು. ಉಪಹಾರದ ವ್ಯವಸ್ಥೆಯನ್ನು ಪ್ರಕಾಶ್ ಪಿಂಟೊ ನಿತ್ಯಾಧರ ಸಾಣೂರು ಇವರು ನೀಡಿರುತ್ತಾರೆ.