ಮಣಿಪಾಲ ಜ್ಞಾನಸುಧಾದ ವಿದ್ಯಾರ್ಥಿನಿ ಅಳಿಶ ದ್ವಿತೀಯ ಸ್ಥಾನ

ಕರ್ನಾಟಕ ರಾಜ್ಯ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಮತ್ತು ಶಾಲಾ ಶಿಕ್ಷಣ
ಇಲಾಖೆಯ ವತಿಯಿಂದ ಜನವರಿ 8ರಂದು ತುಮಕೂರಿನ ಎಂಪ್ರೆಸ್
ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ 2024-
25ನೇ ಸಾಲಿನ ಪದವಿ ಪೂರ್ವ ವಿದ್ಯಾರ್ಥಿಗಳ ರಾಜ್ಯಮಟ್ಟದ
ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಮಣಿಪಾಲ ಜ್ಞಾನಸುಧಾ ಪದವಿ
ಪೂರ್ವ ಕಾಲೇಜು ವಿದ್ಯಾನಗರದ ಪ್ರಥಮ ಪಿಯುಸಿ ವಿಜ್ಞಾನ
ವಿಭಾಗದ ವಿದ್ಯಾರ್ಥಿನಿ ಅಲಿಶಾ ಕ್ಲಿಯಾಂತ ರ‍್ಬೋಜಾ ಇಂಗ್ಲಿಷ್
ಪ್ರಬAಧ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಇವರು
ಮೂಡುಬೆಳ್ಳೆಯ ಎಡ್ವಿನ್ ರ‍್ಬೋಜಾ ಹಾಗೂ ಶಾಂತಿ ಪಿಂಟೋ
ದಂಪತಿ ಸುಪುತ್ರಿ.
ಸಾಧಕ ವಿದ್ಯಾರ್ಥಿನಿಯನ್ನು ಅಜೆಕಾರ್ ಪದ್ಮಗೋಪಾಲ್
ಎಜ್ಯುಕೇಶನ್ ಟ್ರಸ್ಟ್(ರಿ.)ನ ಅಧ್ಯಕ್ಷರಾದ ಡಾ.ಸುಧಾಕರ ಶೆಟ್ಟಿ,
ಮಣಿಪಾಲ ಜ್ಞಾನಸುಧಾ ಪ್ರಾಶುಪಾಲರು, ಬೋಧಕ ಹಾಗೂ
ಬೋಧಕೇತರ ವರ್ಗ ಅಭಿನಂದಿಸಿರುತ್ತಾರೆ.



















