
ಕಾರ್ಕಳ: ಮುಂಡ್ಲಿಯ ಯುವ ಪ್ರತಿಭೆ ಅರ್ಜುನ್ ಉಡುಪಿಯಲ್ಲಿ ನಡೆದ ವಿಶೇಷ ಚೇತನ ವಿದ್ಯಾರ್ಥಿಗಳ ಜಾವೆಲಿನ್ ಹಾಗೂ ಗುಂಡು ಎಸೆತ ಸ್ಪರ್ಧೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುವ ಹಿನ್ನೆಲೆ ಸೌಹಾರ್ದ ಫ್ರೆಂಡ್ಸ್ ಕ್ಲಬ್, ಜಾರ್ಕಳ ಮುಂಡ್ಲಿ ಇದರ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಮುಂದೆ ನಡೆಯುವ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಲು ತಂಡದ ಸದಸ್ಯರು ಶುಭಕೋರಿದರು.



















